ADVERTISEMENT

ಗಡಿ ಸಹಕಾರ: ಭಾರತ–ಚೀನಾ ಮಾತುಕತೆ

ಪಿಟಿಐ
Published 17 ನವೆಂಬರ್ 2017, 19:26 IST
Last Updated 17 ನವೆಂಬರ್ 2017, 19:26 IST
ಗಡಿ ಸಹಕಾರ: ಭಾರತ–ಚೀನಾ ಮಾತುಕತೆ
ಗಡಿ ಸಹಕಾರ: ಭಾರತ–ಚೀನಾ ಮಾತುಕತೆ   

ಬೀಜಿಂಗ್: ಡೋಕಲಾ ಬಿಕ್ಕಟ್ಟಿನ ಬಳಿಕ ಇದೇ ಮೊದಲ ಬಾರಿಗೆ ಭಾರತ ಮತ್ತು ಚೀನಾ ಶುಕ್ರವಾರ ಸಭೆ ಸೇರಿ ಗಡಿ ನಿರ್ವಹಣೆ ಹಾಗೂ ಸಹಕಾರ ಪ್ರಕ್ರಿಯೆ ಕುರಿತು ಚರ್ಚೆ ನಡೆಸಿದವು. ಎಲ್ಲಾ ಗಡಿ ವಿಭಾಗಗಳಲ್ಲಿನ ಪರಿಸ್ಥಿತಿ ಕುರಿತು ಸಹ ಇದೇ ವೇಳೆ ಪರಿಶೀಲನೆ ನಡೆಸಲಾಯಿತು.

ಭಾರತ–ಚೀನಾ ಗಡಿ ವ್ಯವಹಾರಗಳ (ಡಬ್ಲ್ಯುಎಂಸಿಸಿ) ಚರ್ಚೆ ಹಾಗೂ ಸಹಕಾರ ಕುರಿತ 10ನೇ ಸುತ್ತಿನ ಮಾತುಕತೆ ಬೀಜಿಂಗ್‌ನಲ್ಲಿ ನಡೆಯಿತು. ಈ ಮಾತುಕತೆ ಗುಣಾತ್ಮಕವಾಗಿತ್ತು ಎಂದು ಎಂದು ಭಾರತೀಯ ರಾಯಭಾರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತ–ಚೀನಾ ಗಡಿ ಪ್ರದೇಶಗಳಲ್ಲಿ ಶಾಂತಿ ಕಾಪಾಡಿಕೊಳ್ಳುವ ಉದ್ದೇಶದಿಂದ 2012ರಲ್ಲಿ ಡಬ್ಲ್ಯುಎಂಸಿಸಿ ಸ್ಥಾಪಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.