ADVERTISEMENT

ಗುಂಡಿನ ದಾಳಿಯಲ್ಲ, ಸ್ಫೋಟದ ಸದ್ದು ಎಂದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2016, 6:09 IST
Last Updated 29 ಆಗಸ್ಟ್ 2016, 6:09 IST
ಗುಂಡಿನ ದಾಳಿಯಲ್ಲ, ಸ್ಫೋಟದ ಸದ್ದು ಎಂದ ಪೊಲೀಸರು
ಗುಂಡಿನ ದಾಳಿಯಲ್ಲ, ಸ್ಫೋಟದ ಸದ್ದು ಎಂದ ಪೊಲೀಸರು   

ಲಾಸ್‌ ಏಂಜಲೀಸ್‌: ‘ಲಾಸ್‌ ಏಂಜಲೀಸ್‌ ವಿಮಾನ ನಿಲ್ದಾಣದಲ್ಲಿ ಗುಂಡಿನ ದಾಳಿ ನಡೆದಿಲ್ಲ. ಭಾರಿ ಸ್ಫೋಟದ ಸದ್ದು ಕೇಳಿಬಂದಿದೆ’ ಎಂದು ಪೊಲೀಸರು ಹೇಳಿದ್ದಾರೆ.

‘ಸ್ಫೋಟದ ಸದ್ದು ಕೇಳಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಯಾಣಿಕರನ್ನು ಟರ್ಮಿನಲ್‌ನಿಂದ ಹೊರಕ್ಕೆ ಕಳಿಸಲಾಗಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಗುಂಡಿನ ದಾಳಿಯಲ್ಲ ಅದು ದೊಡ್ಡ ಸದ್ದು ಮಾತ್ರ. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ. ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ಲಾಸ್ ಏಂಜಲೀಸ್‌ ಪೊಲೀಸ್‌ ಇಲಾಖೆಯ ಮಾಧ್ಯಮ ವಿಭಾಗದ ಹಿರಿಯ ಅಧಿಕಾರಿ ಆ್ಯಂಡಿ ನೇಮನ್‌ ಟ್ವೀಟ್‌ ಮಾಡಿದ್ದಾರೆ.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.