ADVERTISEMENT

ಚೆಲ್ಸಿಯಾ ಶಿಕ್ಷೆ ಕಡಿಮೆ ಮಾಡಿದ ಅಮೆರಿಕ

ಪಿಟಿಐ
Published 18 ಜನವರಿ 2017, 19:30 IST
Last Updated 18 ಜನವರಿ 2017, 19:30 IST

ವಾಷಿಂಗ್ಟನ್‌ :  ದೇಶದ ಸೂಕ್ಷ್ಮ ದಾಖಲೆಗಳನ್ನು  ವಿಕಿಲೀಕ್ಸ್‌ಗೆ ಹಸ್ತಾಂತರಿಸಿದ ಆರೋಪದ ಮೇಲೆ  ಬಂಧನಕ್ಕೊಳಗಾಗಿ ಜೈಲಿನಲ್ಲಿರುವ ಚೆಲ್ಸಿಯಾ ಮನ್ನಿಂಗ್‌ ಅವರ ಶಿಕ್ಷೆಯ ಅವಧಿಯನ್ನು ಕಡಿತಗೊಳಿಸಿ ಅಧ್ಯಕ್ಷ ಬರಾಕ್‌ ಒಬಾಮ ಅವರು ಅಚ್ಚರಿ ಮೂಡಿಸಿದ್ದಾರೆ.

ಅಮೆರಿಕ ಸೇನೆಯ ಅತ್ಯಂತ ಸೂಕ್ಷ್ಮ  ದಾಖಲೆಗಳನ್ನು ವಿಕಿಲೀಕ್ಸ್‌ಗೆ ಸೋರಿಕೆ ಮಾಡಿದ್ದಕ್ಕಾಗಿ ಸೇನೆಯ ಮಾಜಿ ವಿಶ್ಲೇಷಕಿಯಾಗಿರುವ ಮನ್ನಿಂಗ್‌ ಅವರಿಗೆ 35 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.

ಇದೀಗ ಶಿಕ್ಷೆಯ ಅವಧಿ ಕಡಿತಗೊಂಡಿದ್ದರಿಂದಾಗಿ 2045ರಲ್ಲಿ ಜೈಲಿನಿಂದ ಬಿಡುಗಡೆಗೊಳ್ಳಬೇಕಿದ್ದ ಅವರು ಇದೇ ಮೇ 17ರಂದು ಬಿಡುಗಡೆಯಾಗಲಿದ್ದಾರೆ. 7.50 ಲಕ್ಷ ಪುಟಗಳ ಸೂಕ್ಷ್ಮ ದಾಖಲೆಗಳನ್ನು ಕದ್ದು ವಿಕಿಲೀಕ್ಸ್‌ನ ಎಡ್ವರ್ಡ್‌ ಸ್ನೋಡನ್‌ ಅವರಿಗೆ ನೀಡಿದ ಆರೋಪ ಮನ್ನಿಂಗ್‌ ಮೇಲಿತ್ತು.

ಸ್ನೋಡೆನ್‌ ವಸತಿ ಪರವಾನಗಿ ವಿಸ್ತರಣೆ
ಮಾಸ್ಕೋ(ಎಪಿ):
ಅಮೆರಿಕದ ರಹಸ್ಯ ದಾಖಲೆಗಳನ್ನು ಬಯಲು ಮಾಡಿದ ಎಡ್ವರ್ಡ್‌ ಸ್ನೋಡೆನ್‌ ಅವರ ವಸತಿ ಪರವಾನಗಿಯನ್ನು ರಷ್ಯಾದ ಅಧಿಕಾರಿಗಳು ವಿಸ್ತರಿಸಿದ್ದಾರೆ. 

ಸ್ನೋಡೆನ್‌ 2013ರಲ್ಲಿ ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದರು. ನಂತರ ಅಮೆರಿಕ ಅವರ ಪಾಸ್‌ಪೋರ್ಟ್‌ನ್ನು ರದ್ದುಗೊಳಿಸಿತ್ತು.  ಅಂದಿನಿಂದ ಅವರು ರಷ್ಯಾದಲ್ಲಿ ವಾಸವಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.