ADVERTISEMENT

ಜನಪದ ಕ್ರಾಂತಿಗೀತೆ ಗಾಯಕ ಕಾರ್ವಾನ್ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 9 ಮೇ 2015, 6:43 IST
Last Updated 9 ಮೇ 2015, 6:43 IST
ಕಾರ್ವಾನ್  -ಎಪಿ ಚಿತ್ರ(ಸಂಗ್ರಹ)
ಕಾರ್ವಾನ್ -ಎಪಿ ಚಿತ್ರ(ಸಂಗ್ರಹ)   

ನಾಕ್ಸ್ ವೈಲ್(ದಕ್ಷಿಣ ಅಮೆರಿಕ) (ಎಪಿ): 1960ರ ಸಾಮಾಜಿಕ ನ್ಯಾಯ ಹೋರಾಟಕ್ಕೆ ‘ವಿ ಶೆಲ್ ಓವರ್ ಕಮ್’ ಕ್ರಾಂತಿ ಗೀತೆ ಮೂಲಕ ಸಂಘಟನೆಗೆ ನಾಂದಿ ಹಾಡಿದ ಜನಪದ ಹಾಡುಗಾರ, ಸಂಗೀತ ನಿರ್ದೇಶಕ ಗೇ ಕಾರ್ವಾನ್(87) ನಿಧನರಾಗಿದ್ದಾರೆ.

ಅಮೆರಿಕದ ನೀಗ್ರೋ ಜನಾಂಗದ ನಾಗರಿಕ ಹಕ್ಕುಗಳ ಚಳವಳಿಯ ವೇಳೆ ಒಂದು ಏಕೀಕೃತ ಗೀತೆಯಾಗಿ ಕಾರ್ವಾನ್ ಅವರ ‘ವಿ ಶೆಲ್’ ಮಹತ್ವ ಪಡೆದಿತ್ತು.

ಕಾರ್ವಾನ್ ಅವರು ಟೆನ್ನಿಸ್ಸಿಯಲ್ಲಿದ್ದ ಹೈಲ್ಯಾಂಡರ್ ಸಂಶೋಧನೆ ಮತ್ತು ಶಿಕ್ಷಣಾ ಕೇಂದ್ರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದವರು. ಈ ಸ್ಥಳ ಮಾರ್ಟಿನ್ ಲೂಥರ್ ಜೂನಿಯರ್ ಮತ್ತು ರೋಸಾ ಪಾರ್ಕ್ಸ್ ಸೇರಿದಂತೆ ಸಾಮಾಜಿಕ ಹೋರಾಟಗಾರರನ್ನು ಒಗ್ಗೂಡಿಸಿದ ಸ್ಥಳ ಕೂಡ ಆಗಿದೆ.

1960ರ ಏ.15ರಂದು ವಿದ್ಯಾರ್ಥಿ ಸಂಘಟನೆ ಆಯೋಜಿಸಿದ್ದ ಮೊದಲ ಸಂಘಟನಾ ಸಭೆಯಲ್ಲಿ ಕಾರ್ವಾನ್ ಅವರು ಈ ಕ್ರಾಂತಿ ಗೀತೆಯನ್ನು ಪ್ರಥಮ ಬಾರಿಗೆ ಹಾಡಿದ್ದರು ಎಂದು ಕಾರ್ವಾನ್ ಅವರ ಪತ್ನಿ ಕ್ಯಾಂಡಿಯ ಕಾರ್ವಾನ್ ಹೇಳಿದ್ದರು.
ಕಾರ್ವಾನ್ ಜೀವಿತದ ಕಾಲ: 1927ರ ಜೂಲೈ 27ರಂದು ಜನನ. 2015ರ ಮೇ 2ರಂದು ನಿಧನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.