ADVERTISEMENT

ಜಾಗತಿಕ ಸೈಬರ್‌ ದಾಳಿ

ಪ್ರತಿ ಕಂಪ್ಯೂಟರ್‌ಗೆ ₹ 19,252 ಕೇಳುತ್ತಿರುವ ಹ್ಯಾಕರ್‌ಗಳು

ಏಜೆನ್ಸೀಸ್
Published 14 ಮೇ 2017, 5:15 IST
Last Updated 14 ಮೇ 2017, 5:15 IST
ಜಾಗತಿಕ ಸೈಬರ್‌ ದಾಳಿ
ಜಾಗತಿಕ ಸೈಬರ್‌ ದಾಳಿ   

ಲಂಡನ್/ಮಾಸ್ಕೊ/ಸಿಯಾಟಲ್: ಭಾರತವೂ ಸೇರಿ ವಿಶ್ವದ 100 ದೇಶಗಳ ಲಕ್ಷಾಂತರ ಕಂಪ್ಯೂಟರ್‌ಗಳ ಮೇಲೆ ಹ್ಯಾಕರ್‌ಗಳು ಶುಕ್ರವಾರ ರಾತ್ರಿ ದಾಳಿ ನಡೆಸಿದ್ದಾರೆ.

‘ವನ್ನಾಕ್ರೈ’ ಎಂಬ ಕುತಂತ್ರಾಂಶ ಮೂಲಕ ಕಂಪ್ಯೂಟರ್‌ಗಳಲ್ಲಿನ ದತ್ತಾಂಶಗಳನ್ನು ಸಂಕೇತಾಕ್ಷರಗಳಾಗಿ ಹ್ಯಾಕರ್‌ಗಳು ಮಾರ್ಪಡಿಸಿದ್ದಾರೆ. ಇದರಿಂದಾಗಿ ದಾಳಿಗೆ ಒಳಗಾಗಿರುವ ಕಂಪ್ಯೂಟರ್‌ಗಳಲ್ಲಿನ ಕಡತಗಳನ್ನು ತೆರೆಯಲು ಸಾಧ್ಯವಾಗುತ್ತಿಲ್ಲ.

ಇದನ್ನು ಸರಿಪಡಿಸಲು, ಪ್ರತಿ ಕಂಪ್ಯೂಟರ್‌ಗೆ 300 ಅಮೆರಿಕ ಡಾಲರ್ (ಸುಮಾರು ₹ 19,252) ಪಾವತಿಸಬೇಕು ಎಂದು ಅವರು ಬೇಡಿಕೆ ಇಟ್ಟಿದ್ದಾರೆ.

ADVERTISEMENT

‘3 ದಿನಗಳೊಳಗೆ ಹಣ ಪಾವತಿಸದಿದ್ದರೆ, ದುಪ್ಪಟ್ಟು ಹಣ ನೀಡಬೇಕಾಗುತ್ತದೆ. ಆರು ದಿನಗಳಲ್ಲಿ ಹಣ ಕೊಡದಿದ್ದರೆ, ಎಲ್ಲಾ ದತ್ತಾಂಶಗಳನ್ನು ಅಳಿಸಿ ಹಾಕುತ್ತೇವೆ’ ಎಂದು ಅವರು ಬೆದರಿಕೆ ಹಾಕಿದ್ದಾರೆ. ಆದರೆ ಹ್ಯಾಕರ್‌ಗಳು ಯಾರು ಎಂಬುದು ಇನ್ನೂ ಗೊತ್ತಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.