ADVERTISEMENT

ಜಾಲತಾಣದಲ್ಲಿ ಮೋದಿ

ಚೀನಾದ ‘ಸಿನಾ ವೈಬೊ’ದಲ್ಲಿ ಭಾರತದ ಪ್ರಧಾನಿ ಖಾತೆ

​ಪ್ರಜಾವಾಣಿ ವಾರ್ತೆ
Published 4 ಮೇ 2015, 19:30 IST
Last Updated 4 ಮೇ 2015, 19:30 IST
ಪ್ರಧಾನಿ ಮೋದಿ
ಪ್ರಧಾನಿ ಮೋದಿ   

ಬೀಜಿಂಗ್ (ಪಿಟಿಐ): 50 ಕೋಟಿ ಬಳಕೆದಾರರನ್ನು ಹೊಂದಿರುವ ಚೀನಾದ ಸಾಮಾಜಿಕ ಜಾಲತಾಣವಾದ ‘ಸಿನಾ ವೈಬೊ’ದಲ್ಲಿ ಖಾತೆ ತೆರೆಯುವ ಮೂಲಕ ಪ್ರಧಾನಿ ಮೋದಿ ಅವರು ಚೀನಾ ಪ್ರವಾಸಕ್ಕೆ ಒಂದು ವಾರ ಇರುವ ಮೊದಲೇ ಆ ದೇಶದ ಜನತೆಯನ್ನು ತಲುಪಲು ಮುಂದಾಗಿದ್ದಾರೆ.

ಮೋದಿ ಅವರು ಚೀನಾದ ಸಾಮಾಜಿಕ ಜಾಲ ತಾಣದಲ್ಲಿ ಈ ರೀತಿ ಖಾತೆ ತೆರೆದ ಮೊದಲ ಭಾರತೀಯ ಮುಖಂಡರಾಗಿದ್ದಾರೆ.
‘ಹಲೋ ಚೀನಾ! ವೈಬೊ ಮೂಲಕ ಚೀನಾದ ಸ್ನೇಹಿತರ ಜತೆ ಸಂವಾದ ನಡೆಸಲು ಬಯಸಿದ್ದೇನೆ’ ಎಂದು ಮೋದಿ ಅವರು  ತಮ್ಮ ಪ್ರಥಮ ಪೋಸ್ಟ್ ಕಳುಹಿಸಿದ್ದಾರೆ.

ಮೋದಿ ಅವರು ಜನಪ್ರಿಯ ಜಾಲತಾಣ ಸೇರಿಕೊಂಡಿದ್ದಕ್ಕೆ ಅನೇಕ ಜನರು ಹಾರ್ದಿಕ ಸ್ವಾಗತ ಕೋರಿದ್ದಾರೆ.
ಒಬ್ಬ ಬ್ಲಾಗರ್ ಮೋದಿ ಅವರನ್ನು ‘ಸುಂದರ ವ್ಯಕ್ತಿ’ ಎಂದು ಬಣ್ಣಿಸಿದ್ದಾರೆ.

‘ಮತ್ತೊಬ್ಬ ಅಂತರರಾಷ್ಟ್ರೀಯ ನಾಯಕರೊಬ್ಬರು ವೈಬೊ’ಗೆ ಸೇರ್ಪಡೆಯಾಗಿದ್ದರೆ’ ಎಂದು ಇನ್ನೊಬ್ಬ ಬ್ಲಾಗರ್‌  ಹೇಳಿದ್ದಾರೆ.

ಚೀನಾ ಜನತೆಯ ಜತೆ ಸಂವಹನ ನಡೆಸುವ ಉದ್ದೇಶದಿಂದ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮೆರಾನ್  ಸೇರಿದಂತೆ ವಿಶ್ವದ ಅನೇಕ ಗಣ್ಯರು ‘ಸಿನಾ ವೈಬೊ’ದಲ್ಲಿ ಖಾತೆ  ಹೊಂದಿದ್ದಾರೆ.

ಈಗ ಮೋದಿ ಸಹ ಈ ಸಾಲಿಗೆ ಸೇರಿರುವುದು ಸ್ವಾಗತಾರ್ಹ ಎಂದು ಇನ್ನೊಬ್ಬ ಬ್ಲಾಗರ್ ಪ್ರತಿಕ್ರಿಯಿಸಿದ್ದಾರೆ. ದಕ್ಷಿಣ ಟಿಬೆಟ್‌ ಬಗ್ಗೆ ಇರುವ ವಿವಾದವನ್ನೂ ಕೆಲವರು ಪ್ರಸ್ತಾಪಿಸಿದ್ದಾರೆ. ಅರುಣಾಚಲ ಪ್ರದೇಶ ದಕ್ಷಿಣ ಚೀನಾದ ಭಾಗ ಎಂದು ಚೀನಾ ಹೇಳಿಕೊಳ್ಳುತ್ತದೆ.

ಗುಜರಾತ್ ಮುಖ್ಯಮಂತ್ರಿ ಆಗಿ ಅನೇಕ ಬಾರಿ ಚೀನಾಕ್ಕೆ ಭೇಟಿ ನೀಡಿರುವ ಮೋದಿ ಅವರು ಪ್ರಧಾನಿಯಾಗಿ ಇದೇ ಮೊದಲ ಬಾರಿ ಈ ತಿಂಗಳಲ್ಲಿ ಚೀನಾ ಪ್ರವಾಸ ಮಾಡುವ ಸಂಭವ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.