ADVERTISEMENT

ನಮ್‌ ಹತ್ಯೆ:ಉತ್ತರ ಕೊರಿಯಾ ವ್ಯಕ್ತಿ ಬಂಧನ

ಏಜೆನ್ಸೀಸ್
Published 18 ಫೆಬ್ರುವರಿ 2017, 19:30 IST
Last Updated 18 ಫೆಬ್ರುವರಿ 2017, 19:30 IST

ಕ್ವಾಲಾಲಂಪುರ : ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್ ಅವರ ಮಲಸಹೋದರ ಕಿಮ್ ಜಾಂಗ್‌ ನಮ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕೊರಿಯಾದ ವ್ಯಕ್ತಿಯನ್ನು ಬಂಧಿಸಿರುವುದಾಗಿ ಮಲೇಷ್ಯಾ ಪೊಲೀಸರು ತಿಳಿಸಿದ್ದಾರೆ.

46 ವರ್ಷ ವಯಸ್ಸಿನ ರಿ ಜಾಂಗ್ ಚೊಲ್‌ ಎಂಬುವನನ್ನು ಶುಕ್ರವಾರ ಸಂಜೆ ಬಂಧಿಸಲಾಗಿದೆ. ಇದರೊಂದಿಗೆ, ಪ್ರಕರಣಕ್ಕೆ ಸಂಬಂಧಿಸಿ ಇದೇ ಮೊದಲ ಬಾರಿ ಉತ್ತರ ಕೊರಿಯಾದ ವ್ಯಕ್ತಿಯನ್ನು ಬಂಧಿಸಿದಂತಾಗಿದೆ. ಈಗಾಗಲೇ ಮಲೇಷ್ಯಾದ ವ್ಯಕ್ತಿ ಸೇರಿ ಮೂವರನ್ನು ಬಂಧಿಸಲಾಗಿದೆ.

ನಮ್ ಅವರನ್ನು ಕ್ವಾಲಾಲಂಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಹತ್ಯೆ ಮಾಡಲಾಗಿತ್ತು. ಈ ಮಧ್ಯೆ, ನಮ್ ಅವರ ಕುಟುಂಬದ ಸದಸ್ಯರು ತಮ್ಮ ಡಿಎನ್‌ಎ ಮಾದರಿ ನೀಡಿದ ಬಳಿಕವೇ ಮೃತದೇಹ ಹಸ್ತಾಂತರಿಸುವುದಾಗಿ ಮಲೇಷ್ಯಾ ಶುಕ್ರವಾರ ತಿಳಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.