ADVERTISEMENT

ನೇಪಾಳ: ಮತ್ತೆ ಮೂರು ಬಾರಿ ಲಘು ಕಂಪನ

​ಪ್ರಜಾವಾಣಿ ವಾರ್ತೆ
Published 27 ಮೇ 2015, 11:00 IST
Last Updated 27 ಮೇ 2015, 11:00 IST

ಕಠ್ಮಂಡು(ಪಿಟಿಐ): ಒಂಬತ್ತು ಸಾವಿರ ಮಂದಿಯನ್ನು ಬಲಿ ಪಡೆದ ಪ್ರಬಲ ಭೂಕಂಪ ಸಂಭವಿಸಿ ತಿಂಗಳು ಕಳೆದ ಬೆನ್ನಲ್ಲೇ ಬುಧವಾರ ನಸುಕಿನ ವೇಳೆ ಮತ್ತೆ ಮೂರು ಬಾರಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 4.6ರಷ್ಟು ತೀವ್ರತೆ ದಾಖಲಾಗಿದೆ.

ಕಠ್ಮಂಡುವಿನಿಂದ 75 ಕಿ.ಮೀ. ದೂರದ ಈಶಾನ್ಯ ಭಾಗದ ಸಿಂಧ್ ಪೌಲ್ ಚೌಕ್ ನಲ್ಲಿ 1.16ರ ನಸುಕಿನ ವೇಳೆ 4.6ರಷ್ಟು ತೀವ್ರತೆಯ ಕಂಪನ ಉಂಟಾಗಿದೆ. ಬೆಳಗಿನಜಾವ 1.15ರ ವೇಳೆಗೆ ಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.5ರಷ್ಟು ತೀವ್ರತೆ ದಾಖಲಾಗಿದೆ. ಇದಕ್ಕೂ ಮುನ್ನ 12.3ಕ್ಕೆ ದೊಲ್ ಚೌಕ್ ಜಿಲ್ಲೆಯಲ್ಲಿ ಕಂಪನ ಸಂಭವಿಸಿದ್ದು, 4.2ರಷ್ಟು ತೀವ್ರತೆ ದಾಖಲಾಗಿದೆ ಎಂದು ಕಠ್ಮಂಡುವಿನ ಭೂ ಕಂಪನ ಮಾಪನ ಕೇಂದ್ರ ಹೇಳಿದೆ.

ಏ. 25ರಂದು ಸಂಭವಿಸಿದ 7.9ರಷ್ಟು ತೀವ್ರತೆಯ ಪ್ರಬಲ ಭೂಕಂಪದ ನಂತರ 273 ಬಾರಿ ಭೂಮಿ ಕಂಪಿಸಿರುವುದಾಗಿ ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ.

ಒಂದು ತಿಂಗಳ ಹಿಂದೆ ಸಂಭವಿಸಿದ ಭೂಕಂಪನದಿಂದಾಗಿ 9 ಸಾವಿರ ಮಂದಿ ಸಾವಿಗೀಡಾಗಿದ್ದು, 21 ಸಾವಿರ ಮಂದಿ ಗಾಯಗೊಂಡಿದ್ದಾರೆ. ಸಾವಿರಾರು ಕಟ್ಟಡಗಳು ನೆಲಸಮವಾಗಿದ್ದು, ಸಾವಿರಾರು ಕಟ್ಟಡಗಳು ಭಾಗಶಃ ಹಾನಿಗೊಳಗಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.