ADVERTISEMENT

‘ನೇರ ಮಾತುಕತೆಯೇ ಪರಿಹಾರ’

ಪಿಟಿಐ
Published 22 ಜುಲೈ 2017, 19:30 IST
Last Updated 22 ಜುಲೈ 2017, 19:30 IST

ವಾಷಿಂಗ್ಟನ್‌: ಭಾರತ ಹಾಗೂ ಚೀನಾವು ನೇರ ಹಾಗೂ ಮುಕ್ತ ಮಾತುಕತೆ ನಡೆಸಿ, ಉದ್ವಿಗ್ನತೆಯನ್ನು ಕಡಿಮೆ ಮಾಡುವುದನ್ನು ಅಮೆರಿಕದ ರಕ್ಷಣಾ ಸಚಿವಾಲಯ ‘ಪೆಂಟಗನ್‌ ’ ಪ್ರೋತ್ಸಾಹಿಸುತ್ತದೆ ಎಂದು ಇಲಾಖೆ ಕಾರ್ಯದರ್ಶಿ ಗ್ಯಾರಿ ರೋಸ್‌ ತಿಳಿಸಿದ್ದಾರೆ.

ಕಳೆದೊಂದು ವಾರದಿಂದ ಅಮೆರಿಕ ರಕ್ಷಣಾ ಇಲಾಖೆಯೂ ಇದೇ ಧಾಟಿಯಲ್ಲಿ ಹಲವು ಸಲ ಹೇಳಿಕೆಗಳನ್ನು ನೀಡಿವೆ. ಎರಡು ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಕೊನೆಗೊಳಿಸಲು ನೇರ ಮಾತುಕತೆಯನ್ನು ಪ್ರೋತ್ಸಾಹಿಸುತ್ತದೆ ಎಂದರು.

ಗಡಿ ವಿಚಾರದಲ್ಲಿ ನೆರೆ ರಾಷ್ಟ್ರಗಳ ಜತೆಗೆ ಚೀನಾವು ‘ಒತ್ತಾಯಪೂರ್ವಕವಾಗಿ ನಿರ್ಬಂಧ’ ಹೇರುತ್ತಿವೆ ಎಂದು ಹಲವು ರಾಷ್ಟ್ರಗಳು ಈಗಾಗಲೇ ದೂರು ಸಲ್ಲಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.