ADVERTISEMENT

ನೈಜೀರಿಯಾ: ಬಾಂಬ್ ಸ್ಫೋಟಕ್ಕೆ 44 ಬಲಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2015, 9:06 IST
Last Updated 6 ಜುಲೈ 2015, 9:06 IST
-ಸಾಂದರ್ಭಿಕ ಚಿತ್ರ
-ಸಾಂದರ್ಭಿಕ ಚಿತ್ರ   

ಜೋಸ್(ಎಪಿ): ನೈಜೀರಿಯಾದ ಜೋಸ್ ನಗರದಲ್ಲಿನ ಮಸೀದಿ ಮತ್ತು ಮುಸ್ಲಿಂ ರೆಸ್ಟೋರಂಟ್ ನಲ್ಲಿ ಸೋಮವಾರ ಎರಡು ಕಡೆ ಬಾಂಬ್ ಸ್ಫೋಟ ನಡೆದಿದ್ದು, 44 ಮಂದಿ ಸಾವಿಗೀಡಾಗಿದ್ದಾರೆ ಎಂದು ರಾಷ್ಟ್ರೀಯ ತುರ್ತು ಪರಿಸ್ಥಿತಿ ನಿರ್ವಹಣಾ ಸಂಸ್ಥೆ ಹೇಳಿದೆ.
 
ಘಟನೆಯಲ್ಲಿ 44 ಮಂದಿ ಬಲಿಯಾಗಿದ್ದು, 67 ಜನ ಗಾಯಗೊಂಡಿದ್ದಾರೆ ಎಂದು ರಾಷ್ಟ್ರೀಯ ತುರ್ತು ಪರಿಸ್ಥಿತಿ ನಿರ್ವಹಣಾ ಸಂಸ್ಥೆಯ ಅಧಿಕಾರಿ ಅಬ್ದುಸ್ಸಲಾಂ ಮೊಹಮ್ಮದ್ ಹೇಳಿದ್ದಾರೆ.

ರಂಜಾನ್ ಅಂಗವಾಗಿ ಮಸೀದಿಯಲ್ಲಿ ಉಪನ್ಯಾಸ ಕಾರ್ಯಕ್ರಮಕ್ಕೆ ಜನ ಸೇರಿದ್ದರು. ಈ ವೇಳೆ ಬಾಂಬ್ ಸ್ಫೋಟ ನಡೆದಿದೆ. ಇದಾದ ಬಳಿಕ ಮುಸ್ಲಿಂ ರೆಸ್ಟೊರಂಟ್ ಒಂದರಲ್ಲಿ ಬಾಂಬ್ ಸ್ಫೋಟಗೊಂಡಿದೆ. ಶಾಂತಿ ಕದಡುವ ಉದ್ದೇಶ ಹಾಗೂ ಪ್ರತೀಕಾರವಾಗಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.