ADVERTISEMENT

ನ್ಯೂಜಿಲ್ಯಾಂಡ್ ಪ್ರಧಾನಿ ಜಾನ್ ಕೀ ರಾಜೀನಾಮೆ

ಏಜೆನ್ಸೀಸ್
Published 5 ಡಿಸೆಂಬರ್ 2016, 5:48 IST
Last Updated 5 ಡಿಸೆಂಬರ್ 2016, 5:48 IST
ನ್ಯೂಜಿಲ್ಯಾಂಡ್ ಪ್ರಧಾನಿ ಜಾನ್ ಕೀ ರಾಜೀನಾಮೆ
ನ್ಯೂಜಿಲ್ಯಾಂಡ್ ಪ್ರಧಾನಿ ಜಾನ್ ಕೀ ರಾಜೀನಾಮೆ   

ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್‍ ಪ್ರಧಾನಿ ಜಾನ್ ಕೀ ಸೋಮವಾರ ರಾಜೀನಾಮೆ ನೀಡಿದ್ದಾರೆ.

ಸತತ ಮೂರು ಬಾರಿ ಪ್ರಧಾನಿಯಾಗಿ ಆಯ್ಕೆಯಾಗಿ ಎಂಟು ವರ್ಷಗಳ ಕಾಲ ಆಡಳಿತ ನಡೆಸಿದ್ದ ಅವರು ಮುಂದಿನ ವರ್ಷ ನಾಲ್ಕನೇ ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂಬ ನಿರೀಕ್ಷೆ ಇತ್ತು.

ಆದರೆ ವಿಶ್ವದ ಇತರ ನಾಯಕರು ಮಾಡಿದ ತಪ್ಪನ್ನು ನಾನು ಎಂದಿಗೂ ಮಾಡುವುದಿಲ್ಲ. ನಾನು ಜನಪ್ರಿಯತೆಯ ಉತ್ತುಂಗದಲ್ಲಿರುವಾಗಲೇ ಹೊರನಡೆಯಲು ಇಚ್ಛಿಸುತ್ತೇನೆ ಎಂದು ರಾಜೀನಾಮೆ ಘೋಷಿಸಿದ ಕೀ ಹೇಳಿದ್ದಾರೆ.

ADVERTISEMENT

ಪ್ರಧಾನಿ ಹುದ್ದೆಯ ಜವಾಬ್ದಾರಿಗಳನ್ನು ನಿಭಾಯಿಸುವುದಕ್ಕಾಗಿ ನಾನು ವೈಯಕ್ತಿಕ ಜೀವನದಲ್ಲಿ ಹಲವಾರು ತ್ಯಾಗ ಮಾಡಿದ್ದೇನೆ ಎಂದು ರಾಜೀನಾಮೆ ಘೋಷಿಸಿದ ಕೀ ಭಾವುಕರಾಗಿ ನುಡಿದಿದ್ದಾರೆ.

ನ್ಯಾಷನಲ್ ಪಾರ್ಟಿ ಸದಸ್ಯರಾಗಿರುವ ಕೀ ಡಿಸೆಂಬರ್ 12ರಂದು ಸಭೆ ನಡೆಸಿ ಮುಂದಿನ ಪ್ರಧಾನಿ ಬಗ್ಗೆ ತೀರ್ಮಾನ ತೆಗೆದು ಕೊಳ್ಳಲಿದ್ದಾರೆ.

ಕೀ ಅವರು ಇಂದೇ ಗವರ್ನರ್ ಜನರಲ್ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.