ಲಂಡನ್ (ಪಿಟಿಐ): ಬ್ರಿಟನ್ನ ಮೊದಲ ಹಾಗೂ ಪೂರ್ಣ ಪ್ರಮಾಣದ ಪೋಕಿಮಾನ್ ಗೋ ಗೇಮ್ನ ಆಟಗಾರ್ತಿ ಎನಿಸಿಕೊಳ್ಳಲು ಇದರ ಗೀಳು ಅಂಟಿಸಿಕೊಂಡಿರುವ ಸೋಫಿಯಾ ಪೆಡ್ರಜ್ಜಾ ಎಂಬ ಮಹಿಳೆಯೊಬ್ಬರು ಶಿಕ್ಷಕಿ ವೃತ್ತಿಗೇ ವಿದಾಯ ಹೇಳಿದ್ದಾರೆ. ಈ ಸುಪ್ರಸಿದ್ಧ ಆಟದಿಂದ ಸಾಕಷ್ಟು ಹಣ ಗಳಿಸಬಹುದು ಎಂದು ನಂಬಿ ಕೆಲಸ ತೊರೆದಿದ್ದಾರೆ.
ಪೋಕಿಮಾನ್ ಗೋ ಮಾಸ್ಟರ್ಗಳು ಈಗಾಗಲೇ ಲಾಭಗಳಿಸಲು ತಮ್ಮ ಖಾತೆಗಳನ್ನು ಸಾವಿರಾರು ರೂಪಾಯಿಗಳಿಗೆ ಅಂತರ್ಜಾಲ ಮಾರಾಟ ತಾಣ ಇ–ಬೇನಲ್ಲಿ ಆಟಗಾರರಿಗೆ ಮಾರಾಟ ಮಾಡುತ್ತಿದ್ದಾರೆ.
‘ನಾನು ಈ ಗೇಮ್ ಡೌನ್ಲೋಡ್ ಮಾಡಿಕೊಂಡ ತಕ್ಷಣ ಅನಿಸಿದ್ದು, ಇದರಿಂದ ಹಣ ಮಾಡಲು ಸಾಧ್ಯ ಎಂದು. ನೀವು ನಿರ್ದಿಷ್ಟ ಹಂತ ತಲುಪಿದ್ದಾಗ ಇ–ಬೇನಲ್ಲಿ ಅದನ್ನು ಇತರರಿಗೆ ಮಾರಬಹುದು’ ಎಂದು ಸೋಫಿಯಾ ಹೇಳಿದ್ದಾರೆ. ಈ ಮೂಲಕ ಇವರು ತಿಂಗಳಿಗೆ ₹1.76 ಲಕ್ಷ ಗಳಿಸಿದ್ದಾರೆ.
‘20ನೇ ಲೆವೆಲ್ ತಲುಪಿದವರು ತಮ್ಮ ಖಾತೆಯನ್ನು ಇ–ಬೇನಲ್ಲಿ ₹88 ಸಾವಿರಕ್ಕೆ ಮಾರಾಟಕ್ಕಿಟ್ಟಿದ್ದನ್ನು ಗಮನಿಸಿದ್ದೇನೆ ಎಂದೂ ಅವರು ಹೇಳಿದ್ದಾರೆ. ಈ ಗೇಮ್ನ ಆಕರ್ಷಣೆ ಕಡಿಮೆಯಾದಾಗ ವೃತ್ತಿಗೆ ಮರಳುತ್ತೇನೆ ’ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.