ADVERTISEMENT

ಬೆಂಗಳೂರಿಗೆ ಬಾರದ ಮಲೇಷ್ಯಾ ವಿಮಾನ

ಟೇಕ್‌ ಆಫ್‌ ಆದ ಕೆಲಹೊತ್ತಲ್ಲೇ ತಾಂತ್ರಿಕ ದೋಷ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2014, 20:24 IST
Last Updated 20 ಏಪ್ರಿಲ್ 2014, 20:24 IST

ಕೌಲಾಲಂಪುರ(ಪಿಟಿಐ): ಇಲ್ಲಿಂದ ಬೆಂಗಳೂರಿಗೆ ತೆರಳಬೇಕಿದ್ದ ಸಿಬ್ಬಂದಿ ಸೇರಿದಂತೆ 166 ಪ್ರಯಾಣಿಕರಿದ್ದ ಮಲೇಷ್ಯಾ ಏರ್‌ಲೈನ್ಸ್   (ಎಂಎಚ್‌೧೯೨) ವಿಮಾನವು ಭಾನುವಾರ ರಾತ್ರಿ ಟೇಕ್‌ ಆಫ್‌ ಆದ ಕೆಲ ಹೊತ್ತಲ್ಲೇ ಲ್ಯಾಂಡಿಂಗ್‌ ಗೇರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಹಿಂದಕ್ಕೆ ತೆರಳಬೇಕಾಯಿತು.

ಕೌಲಾಲಂಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಭಾನುವಾರ ರಾತ್ರಿ ೧೦.೯ಕ್ಕೆ ಈ ವಿಮಾನ ಬೆಂಗಳೂರಿಗೆ ಹೊರಟಿದ್ದು ಭಾರತೀಯ ಕಾಲಮಾನರಾತ್ರಿ ೧೧.೩೫ಕ್ಕೆ ತಲುಪಬೇಕಾಗಿತ್ತು.

ಆದರೆ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಈ ವಿಮಾನ ಮರಳಿ ಕೌಲಾಲಂಪುರಕ್ಕೆ ತೆರಳಿದ್ದು ಸೋಮವಾರ ಬೆಳಗಿನ ಜಾವ ೧.೫೬ಕ್ಕೆ (ಮಲ್ಯೇಷ್ಯಾ ಕಾಲಮಾನ) ಸುರಕ್ಷಿತವಾಗಿ ಬಂದಿಳಿದಿದೆ ಎಂದು ಮಲೇಷ್ಯಾ ಏರ್‌ಲೈನ್ಸ್ ಟ್ವೀಟ್‌ ಮಾಡಿದೆ. ಈ ನಡುವೆ ವಿಮಾನ ಹೊರಡುವ ಸಮಯ ಅದರ ಟಯರ್‌ ಒಡೆದು ಹೋಗಿತ್ತು ಎಂದು ಮಲೇಷ್ಯಾ ಸಾರಿಗೆ ಸಚಿವ ಹಿಶಾಮುದ್ದೀನ್‌ ಹುಸೇನ್‌ ಹೇಳಿದ್ದಾರೆ. ‘ವಿಮಾನ ಸುರಕ್ಷಿತವಾಗಿ ಇಳಿದಿರುವುದಕ್ಕೆ ಆ ದೇವರಿಗೆ ಧನ್ಯವಾದ’ ಎಂದು ಹುಸೇನ್‌ ತಿಳಿಸಿದರು.

ಆದರೆ ವಿಮಾನದ ಬಲ ಭಾಗದ ಲ್ಯಾಂಡಿಂಗ್‌ ಗೇರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ವಿಮಾನ ವಾಪಸ್‌ ಬಂದಿಳಿದಿದೆ ಎಂದು ಹೇಳಲಾಗಿದೆ.

ಮಾ. 8ರಂದು ಎಂಎಚ್‌370 ವಿಮಾನ ಕಣ್ಮರೆ­ಆಗಿರುವ ಹಿನ್ನೆಲೆಯಲ್ಲಿ ಆಂತಕ ಮೂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.