ADVERTISEMENT

ಭಾರತೀಯರ ರಕ್ಷಣೆಗೆ ಮುಂದಾಗಿದ್ದ ಅಮೆರಿಕ ಪ್ರಜೆ ಗ್ರಿಲ್ಲಟ್‌ಗೆ ಗೌರವ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2017, 19:30 IST
Last Updated 26 ಮಾರ್ಚ್ 2017, 19:30 IST
ಭಾರತೀಯರ ರಕ್ಷಣೆಗೆ ಮುಂದಾಗಿದ್ದ ಅಮೆರಿಕ ಪ್ರಜೆ ಗ್ರಿಲ್ಲಟ್‌ಗೆ ಗೌರವ
ಭಾರತೀಯರ ರಕ್ಷಣೆಗೆ ಮುಂದಾಗಿದ್ದ ಅಮೆರಿಕ ಪ್ರಜೆ ಗ್ರಿಲ್ಲಟ್‌ಗೆ ಗೌರವ   

ಹ್ಯೂಸ್ಟನ್‌ : ಕನ್ಸಾಸ್‌ನಲ್ಲಿ ನಡೆದ ಗುಂಡಿನ ದಾಳಿ ಸಂದರ್ಭ ಭಾರತೀಯರನ್ನು ರಕ್ಷಿಸಲು ಮುಂದಾಗಿ ಸ್ವತಃ ಗಾಯಗೊಂಡಿದ್ದ ಅಮೆರಿಕದ ಪ್ರಜೆ ಇಯಾನ್‌ ಗ್ರಿಲ್ಲಟ್‌ ಅವರನ್ನು ಹ್ಯೂಸ್ಟನ್‌ನಲ್ಲಿರುವ ಭಾರತೀಯ ಮೂಲದ ಅಮೆರಿಕನ್‌ ಸಮುದಾಯ ಗೌರವಿಸಿದೆ.

‘ಇಂಡಿಯನ್‌ ಹೌಸ್‌’ ವತಿಯಿಂದ ಶನಿವಾರ ನಡೆದ ಸಮಾರಂಭದಲ್ಲಿ 24ರ ಹರೆಯದ ಗ್ರಿಲ್ಲಟ್‌ಗೆ ‘ಎ ಟ್ರು ಅಮೆರಿಕನ್‌ ಹೀರೊ’ ಎಂಬ ಬಿರುದು ನೀಡಿ ಗೌರವಿಸಲಾಯಿತು. ಕನ್ಸಾಸ್‌ನಲ್ಲಿ ಮನೆ ಖರೀದಿಸಲು ಅವರಿಗೆ 1 ಲಕ್ಷ ಡಾಲರ್‌ (ಅಂದಾಜು ₹65 ಲಕ್ಷ) ನೆರವನ್ನೂ ನೀಡಲಾಯಿತು.

ಗ್ರಿಲ್ಲಟ್‌ಗೆ ನೆರವಾಗುವ ಉದ್ದೇಶದಿಂದ ಹ್ಯೂಸ್ಟನ್‌ನ ‘ಇಂಡಿಯನ್‌ ಹೌಸ್‌’ ದೇಣಿಗೆ ಸಂಗ್ರಹ ಅಭಿಯಾನ ನಡೆಸಿತ್ತು. ಹ್ಯೂಸ್ಟನ್‌ನಲ್ಲಿರುವ ಭಾರತದ ಕಾನ್ಸುಲ್‌ ಜನರಲ್‌ ಅನುಪಮ್‌ ರೇ ಅವರೂ ಇದಕ್ಕೆ ಬೆಂಬಲ ನೀಡಿದ್ದರು. 

ADVERTISEMENT

ಅಮೆರಿಕದಲ್ಲಿರುವ ಭಾರತದ ರಾಯಭಾರಿ ನವ್‌ತೇಜ್‌ ಸರ್ನಾ ಅವರು ಗ್ರಿಲ್ಲಟ್‌ಗೆ ಚೆಕ್‌ ಹಸ್ತಾಂತರಿಸಿದರು. ಕಳೆದ ತಿಂಗಳು ಕನ್ಸಾಸ್‌ನಲ್ಲಿ ಅಮೆರಿಕ ನೌಕಾಪಡೆಯ ನಿವೃತ್ತ ಅಧಿಕಾರಿಯೊಬ್ಬ ಭಾರತೀಯರನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದ್ದ. ಈ ವೇಳೆ ಗ್ರಿಲ್ಲಟ್‌ ಅವರು ಸ್ಥಳದಲ್ಲಿದ್ದ ಭಾರತೀಯರನ್ನು ರಕ್ಷಿಸಲು ಮುಂದಾಗಿ ಗಾಯಗೊಂಡಿದ್ದರು.

ಹೈದರಾಬಾದ್‌ ಮೂಲದ ಎಂಜಿನಿಯರ್ ಶ್ರೀನಿವಾಸ್‌ ಕೂಚಿಭೊಟ್ಲ ದಾಳಿಯಲ್ಲಿ ಮೃತಪಟ್ಟಿದ್ದರೆ, ಅವರ ಸ್ನೇಹಿತ ಅಲೋಕ್‌್ ಮದಸಾನಿ
ಗಾಯಗೊಂಡಿದ್ದರು.

ಒಳ್ಳೆಯ ಸಂದೇಶ: ‘ಈಗ ನಾನು ಜನರಲ್ಲಿ ಭರವಸೆ ಮತ್ತು ಪ್ರೀತಿಯನ್ನು ಹಂಚಬಹುದಾಗಿದೆ. ಜನರಿಗೆ ಸಾರಲು ನನ್ನ ಬಳಿ ಉತ್ತಮ ಸಂದೇಶ ಇದೆ. ಇಂಡಿಯಾ ಹೌಸ್‌ನಲ್ಲಿ ಇರಲು ನನಗೆ ಹೆಮ್ಮೆ ಎನಿಸುತ್ತಿದೆ’ ಎಂದು ಗ್ರಿಲ್ಲಟ್‌ ಹೇಳಿದ್ದಾರೆ.

‘ದಾಳಿಕೋರನನ್ನು ನಾನು ತಡೆಯದೆ ಹೋಗಿದ್ದರೆ ಅಥವಾ ತಡೆಯಲು ಯತ್ನಿಸದಿದ್ದರೆ ಆತ್ಮವಂಚನೆ ಮಾಡಿಕೊಂಡಂತೆ ಆಗುತ್ತಿತ್ತು’ ಎಂದಿದ್ದಾರೆ.
‘ಭಾರತೀಯರ ರಕ್ಷಿಸಲು  ಮುಂದಾದ ಗ್ರಿಲ್ಲಟ್‌ ಅವರ ನಿಸ್ವಾರ್ಥತೆಯನ್ನು ಗುರುತಿಸಿ, ಭಾರತೀಯ ಮೂಲದ ಅಮೆರಿಕನ್‌ ಸಮುದಾ
ಯದ ಪರವಾಗಿ ಇಂಡಿಯಾ ಹೌಸ್‌ ಅವರಿಗೆ ಗೌರವ ಸಲ್ಲಿಸಿದೆ’ ಎಂದು ಫೇಸ್‌ಬುಕ್‌ ಪುಟದಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.