ADVERTISEMENT

ಭಾರತ ಭಯೋತ್ಪಾದನೆಯ ಸಂತ್ರಸ್ತ ರಾಷ್ಟ್ರ: ಟ್ರಂಪ್

ಪಿಟಿಐ
Published 22 ಮೇ 2017, 19:30 IST
Last Updated 22 ಮೇ 2017, 19:30 IST
ಭಾರತ ಭಯೋತ್ಪಾದನೆಯ ಸಂತ್ರಸ್ತ ರಾಷ್ಟ್ರ: ಟ್ರಂಪ್
ಭಾರತ ಭಯೋತ್ಪಾದನೆಯ ಸಂತ್ರಸ್ತ ರಾಷ್ಟ್ರ: ಟ್ರಂಪ್   
ರಿಯಾದ್: ‘ಭಾರತವು ಭಯೋತ್ಪಾದನೆಯ ಸಂತ್ರಸ್ತ ರಾಷ್ಟ್ರವಾಗಿದೆ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
 
ಜತೆಗೆ, ಯಾವುದೇ ರಾಷ್ಟ್ರ ತನ್ನ ನೆಲದಲ್ಲಿ ಭಯೋತ್ಪಾದಕರಿಗೆ ಆಶ್ರಯ ನೀಡಬಾರದು ಎಂದು ಪರೋಕ್ಷವಾಗಿ ಪಾಕಿಸ್ತಾನಕ್ಕೆ ಸೂಚಿಸಿದ್ದಾರೆ.
 
ಸೌದಿ ಅರೇಬಿಯಾದಲ್ಲಿ ‘ಅರಬ್‌–ಇಸ್ಲಾಮಿಕ್ – ಅಮೆರಿಕ ಶೃಂಗಸಭೆ’ಯಲ್ಲಿ ಭಾನುವಾರ ಮಾತನಾಡಿದ ಅವರು, ‘ಯುರೋಪ್ ರಾಷ್ಟ್ರಗಳೂ ಭಯೋತ್ಪಾದನೆಯ ಸಮಸ್ಯೆ ಎದುರಿಸುತ್ತಿವೆ. ಆಫ್ರಿಕಾ, ದಕ್ಷಿಣ ಅಮೆರಿಕ, ಭಾರತ, ರಷ್ಯಾ, ಚೀನಾ, ಆಸ್ಟ್ರೇಲಿಯಾ ಎಲ್ಲವೂ ಭಯೋತ್ಪಾದನೆಯ ಸಂತ್ರಸ್ತ ದೇಶಗಳಾಗಿವೆ’ ಎಂದು ಹೇಳಿದ್ದಾರೆ.
 
‘ಇಸ್ಲಾಮಿಕ್ ಉಗ್ರವಾದವನ್ನು ನಿರ್ಮೂಲ ಮಾಡಲು ಮಧ್ಯಪ್ರಾಚ್ಯ ರಾಷ್ಟ್ರಗಳು ಒಂದಾಗಿ ಹೋರಾಡಬೇಕು’ ಎಂದು ಕರೆ ನೀಡಿದ್ದಾರೆ. 
 
‘ಭಯೋತ್ಪಾದನೆ ವಿರುದ್ಧದ ಹೋರಾಟವು ವಿವಿಧ ನಂಬಿಕೆಗಳ ನಡುವಣ ಹೋರಾಟವಲ್ಲ. ಮಾನವನ ಜೀವದ ಜತೆ ಚೆಲ್ಲಾಟವಾಡುವ ಕ್ರೂರ ಅಪರಾಧಿಗಳಿಂದ ಸುರಕ್ಷತೆ ಬಯಸುವ ಜನರನ್ನು ರಕ್ಷಿಸಲು ನಡೆಸುವ ಹೋರಾಟ’ ಎಂದು ಟ್ರಂಪ್ ಹೇಳಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.