ADVERTISEMENT

ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್‌

ಪಿಟಿಐ
Published 22 ಜನವರಿ 2017, 7:16 IST
Last Updated 22 ಜನವರಿ 2017, 7:16 IST
ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್‌
ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್‌   

ವಾಷಿಂಗ್ಟನ್‌: ಪತ್ರಕರ್ತರನ್ನು ಮಾನವ ಕುಲದಲ್ಲೇ ಅತಿ ಅಪ್ರಾಮಾಣಿಕರು ಎಂದು ಜರಿದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಮಾಧ್ಯಮಗಳೊಂದಿಗೆ ಸಮರ ಮುಂದುವರಿಸುವ ಸೂಚನೆ ನೀಡಿದ್ದಾರೆ.

ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಸಾಕ್ಷಿಯಾಗಿದ್ದರು. ಆದರೆ, ಮುಂಜಾನೆ ಸುದ್ದಿ ಮಾಧ್ಯಮ ಖಾಲಿ ಮೈದಾನವನ್ನು ತೋರಿಸುತ್ತಿತ್ತು. ‘ಕಾರ್ಯಕ್ರಮದಲ್ಲಿ ಜನರು ಭಾಗಿಯಾಗದೆ ಬಣಗುಡುತ್ತಿತ್ತು...!’ ಎಂಬ ಸುದ್ದಿ ಪ್ರಸಾರವಾಗುತ್ತಿತ್ತು.

ಕಡಿಮೆ ಜನ ಭಾಗಿಯಾಗಿದ್ದರು ಎಂಬ ಸುಳ್ಳು ಸುದ್ದಿ ಪ್ರಕಟಿಸಿರುವ ಮಾಧ್ಯಮಗಳು ತಕ್ಕ ಪರಿಣಾಮವನ್ನು ಎದುರಿಸುತ್ತವೆ ಎಂದು ಅಮೆರಿಕ ನೂತನ ಸಾರಥಿ ಟ್ರಂಪ್‌ ಗುಡುಗಿದ್ದಾರೆ.

ADVERTISEMENT

ಸೆಂಟ್ರಲ್‌ ಇಂಟೆಲಿಜೆನ್ಸ್‌ ಏಜೆನ್ಸಿ(ಸಿಐಎ) ಮುಖ್ಯ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್‌, ‘ಸಿಐಎ ಜತೆಗೆ ಮನಸ್ತಾಪವಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಹಾಗಾಗಿ, ನನ್ನ ಮೊದಲ ಭೇಟಿ ಇಲ್ಲಿ. ಮಾಧ್ಯಮಗಳೊಂದಿಗೆ ನನ್ನ ಸಮರ ನಿರಂತರವಾಗಿದೆ. ಅವರು ಮಾನವ ಕುಲದಲ್ಲೇ ಅತಿ ಅಪ್ರಮಾಣಿಕರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.