ADVERTISEMENT

ಮ್ಯಾಂಚೆಸ್ಟರ್‌ ದಾಳಿ ಮೂವರ ಬಂಧನ

ಪಿಟಿಐ
Published 24 ಮೇ 2017, 19:30 IST
Last Updated 24 ಮೇ 2017, 19:30 IST

ಲಂಡನ್‌: ಬ್ರಿಟನ್‌ನ ಮ್ಯಾಂಚೆಸ್ಟರ್‌ನಲ್ಲಿ ನಡೆದ ಆತ್ಮಾಹುತಿ ಬಾಂಬ್‌ ದಾಳಿಗೆ ಸಂಬಂಧಿಸಿದಂತೆ ಇನ್ನೂ ಮೂವರು ವ್ಯಕ್ತಿಗಳನ್ನು ಬಂಧಿಸಲಾಗಿದೆ. 22 ಮಂದಿಯನ್ನು ಬಲಿ ತೆಗೆದುಕೊಂಡ ಈ ಘಟನೆ ಸಂಬಂಧ, ಒಟ್ಟು ನಾಲ್ಕು ಮಂದಿ ಸೆರೆ ಸಿಕ್ಕಂತಾಗಿದೆ.

ಮಂಗಳವಾರ ರಾತ್ರಿ ಬಂಧಿಸಿರುವ ವ್ಯಕ್ತಿಯು, ಈ ದಾಳಿಗೆ ಕಾರಣನಾದ  ಲಿಬಿಯಾ ಮೂಲದ ಸಲ್ಮಾನ್‌ ಅಬೇದಿಯ ಸಹೋದರ ಇಸ್ಮಾಯಿಲ್‌ (23) ಎಂದು ಬಿಬಿಸಿ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.