ADVERTISEMENT

‘ರಷ್ಯಾ ಸಂಪರ್ಕ ಬಯಸಿದ್ದ ಕುಷ್ನೆರ್’

ಪಿಟಿಐ
Published 27 ಮೇ 2017, 19:30 IST
Last Updated 27 ಮೇ 2017, 19:30 IST
‘ರಷ್ಯಾ ಸಂಪರ್ಕ ಬಯಸಿದ್ದ ಕುಷ್ನೆರ್’
‘ರಷ್ಯಾ ಸಂಪರ್ಕ ಬಯಸಿದ್ದ ಕುಷ್ನೆರ್’   

ವಾಷಿಂಗ್ಟನ್: ಅಧ್ಯಕ್ಷೀಯ ಚುನಾವಣೆ ನಡೆದ ವಾರದ ಬಳಿಕ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಳಿಯ ಹಾಗೂ ಸಲಹೆಗಾರ ಜೇರ್ಡ್ ಕುಷ್ನೆರ್ ಅವರು ರಷ್ಯಾ ಜೊತೆ ರಹಸ್ಯ ಸಂಪರ್ಕ  ಬಯಸಿದ್ದರು ಎಂದು ‘ವಾಷಿಂಗ್ಟನ್ ಪೋಸ್ಟ್’ ವರದಿ ಮಾಡಿದೆ.

ರಹಸ್ಯ ಸಂಪರ್ಕ ಏರ್ಪಡಿಸುವಂತೆ ಅಮೆರಿಕಕ್ಕೆ ರಷ್ಯಾದ ರಾಯಭಾರಿಯಾಗಿದ್ದ ಸೆರ್ಗೆ ಕಿಸ್ಲಿಯಾಕ್ ಅವರ ಭೇಟಿ ಸಂದರ್ಭ ಕುಷ್ನೆರ್ ಚರ್ಚಿಸಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ. 

ಆದರೆ ಸಭೆಯ ವಿಚಾರಗಳನ್ನು ಬಹಿರಂಗಪಡಿಸದಂತೆ ಅಮೆರಿಕ ಗುಪ್ತಚರ ಇಲಾಖೆ ತಡೆಹಿಡಿದಿತ್ತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾಗಿ ವರದಿ ತಿಳಿಸಿದೆ. ಕುಷ್ನೆರ್ ಮೇಲೆ ಎಫ್‌ಬಿಐ ನಿಗಾ ಇರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.