ADVERTISEMENT

‘ರಾಜತಾಂತ್ರಿಕ ಮಾರ್ಗ ಅನುಸರಿಸಿ’

ಪಿಟಿಐ
Published 17 ಏಪ್ರಿಲ್ 2017, 19:30 IST
Last Updated 17 ಏಪ್ರಿಲ್ 2017, 19:30 IST

ನ್ಯೂಯಾರ್ಕ್‌: ‘ಆಪ್ಘಾನಿಸ್ತಾನ ಹಾಗೂ ಇತರ ನೆರೆಯ ರಾಷ್ಟ್ರಗಳ ಜತೆ ರಾಜತಾಂತ್ರಿಕ ಮಾರ್ಗದ ಮೂಲಕ ಸಂಬಂಧ ವೃದ್ಧಿಸಿಕೊಳ್ಳಿ’ ಎಂದು  ಪಾಕಿಸ್ತಾನಕ್ಕೆ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಲೆಫ್ಟಿನೆಂಟ್‌ ಜನರಲ್‌ ಎಚ್‌.ಆರ್‌. ಮೆಕ್‌ಮಾಸ್ಟರ್‌ ಸಲಹೆ ನೀಡಿದ್ದಾರೆ.

ಉಗ್ರರಿಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನದ ಕ್ರಮವನ್ನು ಟೀಕಿಸಿದ ಅವರು, ‘ಪಾಕಿಸ್ತಾನದ ವಿರುದ್ಧ ಕಠಿಣ ನಿರ್ಧಾರ ಕೈಗೊಳ್ಳಲಾಗುವುದು. ಬೇರೆ ದೇಶಗಳ ವಿರುದ್ಧ ಪಾಕಿಸ್ತಾನ ಉಗ್ರರನ್ನು ಬಳಸಿಕೊಳ್ಳುತ್ತಿದೆ. ಭಯೋತ್ಪಾದಕ ಮುಖಂಡರಿಗೆ ಗೌರವ ಸಲ್ಲಿಸುತ್ತದೆ’ ಎಂದು ಅವರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT