ADVERTISEMENT

ಲಂಡನ್‌–ಚೀನಾ ನೇರ ರೈಲು ‘ಈಸ್ಟ್ ವಿಂಡ್‌’ ಪ್ರಯಾಣ ಪೂರ್ಣ

ಏಜೆನ್ಸೀಸ್
Published 29 ಏಪ್ರಿಲ್ 2017, 19:30 IST
Last Updated 29 ಏಪ್ರಿಲ್ 2017, 19:30 IST
ಪ್ರಜಾವಾಣಿ ಗ್ರಾಫಿಕ್ಸ್‌
ಪ್ರಜಾವಾಣಿ ಗ್ರಾಫಿಕ್ಸ್‌   

ಬೀಜಿಂಗ್: ಲಂಡನ್‌–ಚೀನಾ ನಡುವಣ ಮೊದಲ ನೇರ ರೈಲು 12,000 ಕಿಲೋಮೀಟರ್‌ ಸಂಚರಿಸಿ ಚೀನಾದ ಯಿವು ನಗರಕ್ಕೆ ಶನಿವಾರ ತಲುಪಿದೆ. ಇದು ಜಗತ್ತಿನ ಎರಡನೇ ಅತಿದೊಡ್ಡ ರೈಲು ಮಾರ್ಗ ಎನಿಸಿದೆ. (ಚೀನಾ–ಮ್ಯಾಡ್ರಿಡ್ ಅತಿದೊಡ್ಡ ರೈಲ್ವೆ ಮಾರ್ಗ) ಪಶ್ಚಿಮ ಯುರೋಪ್ ಜತೆ ವಾಣಿಜ್ಯ ವ್ಯವಹಾರ ಉತ್ತಮಪಡಿಸುವುದು ಚೀನಾದ ಉದ್ದೇಶ.

ಈ ಮೂಲಕ ಲಂಡನ್, ಚೀನಾದಿಂದ ನೇರ ಸಂಪರ್ಕ ಪಡೆದ ಜಗತ್ತಿನ 15ನೇ ನಗರ ಎನಿಸಿದೆ. ಸಮುದ್ರ ಮಾರ್ಗಕ್ಕೆ ಹೋಲಿಸಿದರೆ ರೈಲು ಮಾರ್ಗ 30 ದಿನ ಉಳಿಸುತ್ತದೆ.

ಸಾಮರ್ಥ್ಯ: ಒಮ್ಮೆಗೆ 88 ಕಂಟೇನರ್‌ಗಳನ್ನು ಸಾಗಿಸುತ್ತದೆ (ಸರಕು ಸಾಗಣೆ ಹಡಗು 10ರಿಂದ 20 ಸಾವಿರ ಕಂಟೇನರ್‌ಗಳನ್ನು ಸಾಗಿಸುತ್ತದೆ)

ADVERTISEMENT

ಆರಂಭ: ಏಪ್ರಿಲ್ 10 ಲಂಡನ್‌.

ಮುಕ್ತಾಯ: ಏಪ್ರಿಲ್ 29 ರಂದು ಚೀನಾದ ಯಿವು ನಗರ.


ಪ್ರಜಾವಾಣಿ ಗ್ರಾಫಿಕ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.