ADVERTISEMENT

ಲಾಹೋರ್ ದಾಳಿಯ 10 ಮಂದಿ ಸಂಚುಕೋರರನ್ನು ಹತ್ಯೆಗೈದ ಪಾಕ್ ಪೊಲೀಸರು

ಫೆಬ್ರುವರಿಯಲ್ಲಿ ನಡೆದಿದ್ದ ಆತ್ಮಾಹುತಿ ಬಾಂಬ್ ದಾಳಿಯ ಸಂಚು

ಪಿಟಿಐ
Published 8 ಏಪ್ರಿಲ್ 2017, 11:23 IST
Last Updated 8 ಏಪ್ರಿಲ್ 2017, 11:23 IST
ಲಾಹೋರ್ ದಾಳಿಯ 10 ಮಂದಿ ಸಂಚುಕೋರರನ್ನು ಹತ್ಯೆಗೈದ ಪಾಕ್ ಪೊಲೀಸರು
ಲಾಹೋರ್ ದಾಳಿಯ 10 ಮಂದಿ ಸಂಚುಕೋರರನ್ನು ಹತ್ಯೆಗೈದ ಪಾಕ್ ಪೊಲೀಸರು   
ಲಾಹೋರ್: ಇಲ್ಲಿನ ಮಾಲ್ ರಸ್ತೆಯಲ್ಲಿ ಫೆಬ್ರುವರಿಯಲ್ಲಿ ನಡೆದಿದ್ದ ಆತ್ಮಾಹುತಿ ಬಾಂಬ್ ದಾಳಿಯ ಸಂಚು ರೂಪಿಸಿದ್ದ ಜಮಾತ್‌–ಉಲ್–ಅಹ್ರಾರ್ ಹಾಗೂ ತೆಹ್ರಿಕ್–ಐ–ತಾಲಿಬಾನ್ ಪಾಕಿಸ್ತಾನ್‌ (ಟಿಟಿಪಿ) ಸಂಘಟನೆಗೆ ಸೇರಿದ 10 ಮಂದಿ ಉಗ್ರರನ್ನು ಪೊಲೀಸರು ಶನಿವಾರ ಗುಂಡಿಕ್ಕಿ ಹತ್ಯೆಗೈದಿದ್ದಾರೆ.
 
ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಆರು ಜನ ಪೊಲೀಸರು ಸೇರಿದಂತೆ ಒಟ್ಟು 15 ಮಂದಿ ಮೃತಪಟ್ಟಿದ್ದರು. ಈ ಘಟನೆಯಲ್ಲಿ 71ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಜಮಾತ್‌–ಉಲ್‌–ಅಹ್ರಾರ್ ಸಂಘಟನೆಯು ಈ ದಾಳಿಯ ಹೊಣೆ ಹೊತ್ತಿತ್ತು.
 
ಆತ್ಮಾಹುತಿ ದಾಳಿಗೆ ಸಂಚು ರೂಪಿಸಿದ್ದ ಅನ್ವರ್‌ ಉಲ್‌ಹಾಕ್, ಇರ್ಫಾನ್, ಇಮಾಮ್ ಶಾ  ಸೇರಿದಂತೆ 10 ಮಂದಿ ಉಗ್ರರುನ್ನು ಪೊಲೀಸರು ಹೊಡೆದುರುಳಿಸಿದ್ದಾರೆ. ಉಗ್ರರ ಬಳಿಯಿದ್ದ ಶಸ್ತ್ರಾಸ್ತ್ರ ಹಾಗೂ ಯುದ್ಧ ಸಾಮಾಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.