ADVERTISEMENT

ಸೂಫಿ ದರ್ಗಾದಲ್ಲಿ ಆತ್ಮಾಹುತಿ ದಾಳಿ: ಮೃತರ ಸಂಖ್ಯೆ 140

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2017, 8:58 IST
Last Updated 17 ಫೆಬ್ರುವರಿ 2017, 8:58 IST
ಸೂಫಿ ದರ್ಗಾದಲ್ಲಿ ಆತ್ಮಾಹುತಿ ದಾಳಿ: ಮೃತರ ಸಂಖ್ಯೆ 140
ಸೂಫಿ ದರ್ಗಾದಲ್ಲಿ ಆತ್ಮಾಹುತಿ ದಾಳಿ: ಮೃತರ ಸಂಖ್ಯೆ 140   

ಕರಾಚಿ : ಸಿಂಧ್‌ ಪ್ರಾಂತ್ಯದ ಸೆಹ್ವಾನ್‌ ಪಟ್ಟಣದಲ್ಲಿನ ಸೂಫಿ ದರ್ಗಾದ ಲಾಲ್‌ ಷಹಬಾಜ್‌ ಖಲಂದರ್‌ದೊಳಗೆ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 140ಕ್ಕೆ ಏರಿಕೆಯಾಗಿದ್ದು 200ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ ಎಂದು ಪಾಕಿಸ್ತಾನದ ಡಾನ್ ಪತ್ರಿಕೆ ವರದಿ ಮಾಡಿದೆ.

‘ಧಮಾಲ್‌’ ನೃತ್ಯ ಮತ್ತು ಪ್ರಾರ್ಥನೆ ಸಲುವಾಗಿ ನೂರಾರು ಭಕ್ತರು ಮಂದಿರದ ಆವರಣದಲ್ಲಿ ನೆರೆದಿದ್ದ ಸಂದರ್ಭದಲ್ಲಿ  ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂದಿರದಲ್ಲಿ ಮಹಿಳೆಯರಿಗಾಗಿ ಮೀಸಲಿಟ್ಟ ಸ್ಥಳದಲ್ಲಿ ಈ ಆತ್ಮಾಹುತಿ ದಾಳಿ ನಡೆದಿದೆ. ಮುಖ್ಯದ್ವಾರದಿಂದ ಒಳ ಬಂದ ದಾಳಿಕೋರ ಮೊದಲು ನೃತ್ಯ ನಡೆಯುತ್ತಿದ್ದ ಸ್ಥಳದತ್ತ ಗ್ರೆನೇಡ್‌ ಎಸೆದಿದ್ದಾನೆ. ಆದರೆ ಅದು ಸ್ಫೋಟಗೊಳ್ಳದ ಬಳಿಕ ತನ್ನನ್ನು ತಾನೇ ಸ್ಫೋಟಿಸಿಕೊಂಡ ಎಂದು  ಸ್ಥಳೀಯರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.