ADVERTISEMENT

ಸೋಲಾರ್ ವಿಮಾನ ಪರ್ಯಟನೆ ಅಂತ್ಯ

​ಪ್ರಜಾವಾಣಿ ವಾರ್ತೆ
Published 24 ಜುಲೈ 2016, 19:30 IST
Last Updated 24 ಜುಲೈ 2016, 19:30 IST

ಕೈರೊ (ಎಎಫ್‌ಪಿ): ಜಗತ್ತಿನ ಮೊದಲ ಸೌರಶಕ್ತಿ ಚಾಲಿತ ವಿಮಾನವು ತನ್ನ ವಿಶ್ವ ಪರ್ಯಟನೆಯನ್ನು ಅಂತ್ಯಗೊಳಿಸುವ ಸಲುವಾಗಿ ಭಾನುವಾರ ಈಜಿಪ್ಟ್‌ನ ಕೈರೊದಿಂದ ಅಬುದಾಬಿಯತ್ತ  ಪಯಣಿಸಿತು.

ಸೂರ್ಯನ ಶಕ್ತಿಯ ಮೂಲಕವೇ ಹಾರಬಲ್ಲ ‘ಸೋಲಾರ್‌ ಇಂಪಲ್ಸ್‌ 2’ 2015ರ ಮಾರ್ಚ್‌ 9ರಂದು ಅಬುದಾಬಿಯಿಂದ ಪರ್ಯಟನೆ ಪ್ರಾರಂಭಿಸಿತ್ತು.
‘ಇದು ಇಂಧನಕ್ಕಾಗಿ, ಉತ್ತಮ ಜಗತ್ತಿಗಾಗಿ ರೂಪಿಸಲಾದ ಯೋಜನೆ’ ಎಂದು ವಿಮಾನದ ಪೈಲಟ್‌ ಸ್ವಿಟ್ಜರ್ಲೆಂಡ್‌ನ ಬರ್ಟ್‌ರಾಂಡ್‌ ಪಿಕ್ಕಾರ್ಡ್‌ ಹೇಳಿದ್ದಾರೆ.
ಪೈಲಟ್‌ಗಳಾದ ಪಿಕ್ಕಾರ್ಡ್‌ ಮತ್ತು ಆಂಡ್ರೆ ಬಾರ್ಷ್‌ಬರ್ಗ್‌ ಜಗತ್ತಿನಾದ್ಯಂತ ಸುಮಾರು 35 ಸಾವಿರ ಕಿ.ಮೀ ಹಾರಾಟ ನಡೆಸಿದ್ದಾರೆ.

ಕಾರ್‌ನಷ್ಟೇ ತೂಕ ಹೊಂದಿರುವ ವಿಮಾನಕ್ಕೆ ಬೋಯಿಂಗ್ 747 ವಿಮಾನದ ರೆಕ್ಕೆಗಳನ್ನು ಅಳವಡಿಸಲಾಗಿದೆ. ಇದರಲ್ಲಿ 17 ಸಾವಿರ ಸೌರಕೋಶಗಳಿವೆ. ಸೌರಶಕ್ತಿಯ ವಿದ್ಯುತ್‌ನಿಂದ ಇದು ರಾತ್ರಿ ವೇಳೆಯೂ ಹಾರಾಟ ನಡೆಸಬಲ್ಲದು. ಗಂಟೆಗೆ 48 ಗಂಟೆ ವೇಗವಾಗಿ ಸಲಿಸಬಲ್ಲ ವಿಮಾನ, ಸಂಪೂರ್ಣ ಸೂರ್ಯನ ಬೆಳಕಿದ್ದಾಗ ದ್ವಿಗುಣ ವೇಗದಲ್ಲಿ ಚಲಿಸಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.