ADVERTISEMENT

ಸ್ಕರ್ಟ್‌: ಯುವತಿ ಬಂಧನ, ಬಿಡುಗಡೆ

ಪಿಟಿಐ
Published 19 ಜುಲೈ 2017, 19:30 IST
Last Updated 19 ಜುಲೈ 2017, 19:30 IST
ಸ್ಕರ್ಟ್‌: ಯುವತಿ ಬಂಧನ, ಬಿಡುಗಡೆ
ಸ್ಕರ್ಟ್‌: ಯುವತಿ ಬಂಧನ, ಬಿಡುಗಡೆ   

ದುಬೈ: ಮಿನಿ ಸ್ಕರ್ಟ್‌ ಧರಿಸಿ, ತಲೆಗೂದಲು ಹರಡಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಓಡಾಡಿದ ಆರೋಪದಲ್ಲಿ ಯುವತಿಯೊಬ್ಬರನ್ನು ಸೌದಿ ಅರೇಬಿಯಾದ ಪೊಲೀಸರು ಬಂಧಿಸಿದ್ದಾರೆ. ಯುವತಿ ಕ್ಷಮೆಕೋರಿದ ಮೇಲೆ ಆಕೆಯನ್ನು ಬಿಡುಗಡೆ ಮಾಡಲಾಗಿದೆ.

ಮಿನಿ ಸ್ಕರ್ಟ್‌ ತೊಟ್ಟು ನಡೆದ   ವಿಡಿಯೊವನ್ನು ಸಾಮಾಜಿಕ ಜಾಲತಾಣ  ಸ್ನ್‍ಯಾಪ್‌ಚಾಟ್‌ ಮೂಲಕ ಯುವತಿ  ಹಂಚಿಕೊಂಡಿದ್ದರು. ಈ ರೀತಿ ಮಹಿಳೆಯರು ವೇಷಭೂಷಣ ಧರಿಸುವುದಕ್ಕೆ ಸೌದಿ ಅರೇಬಿಯಾದಲ್ಲಿ ನಿರ್ಬಂಧ ಇರುವ ಕಾರಣ,  ಇದಕ್ಕೆ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

ಯುವತಿ ಕ್ಷಮೆ ಕೋರಿದ ಕಾರಣ, ಆಕೆಯ ವಿರುದ್ಧ ಯಾವುದೇ ರೀತಿಯ ಮೊಕದ್ದಮೆ ದಾಖಲು ಮಾಡಿಲ್ಲ ಎಂದು ಅಲ್ಲಿಯ ಮಾಧ್ಯಮ ವರದಿ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.