ADVERTISEMENT

31ರಂದು ‘ಬ್ಲೂ ಮೂನ್ ಎಕ್ಲಿಪ್ಸ್’

ಪಿಟಿಐ
Published 3 ಜನವರಿ 2018, 19:30 IST
Last Updated 3 ಜನವರಿ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್: ಇದೇ ತಿಂಗಳು 31ರಂದು ಸಂಪೂರ್ಣ ಚಂದ್ರಗ್ರಹಣ ಆಗಲಿದೆ. ಈ ಬಾರಿಯ ಗ್ರಹಣವನ್ನು ‘ಬ್ಲೂ ಮೂನ್ ಎಕ್ಲಿಪ್ಸ್’ ಎಂದು ಕರೆಯಲಾಗಿದೆ. ಒಂದೇ ತಿಂಗಳಲ್ಲಿ ಎರಡು ಬಾರಿ ಹುಣ್ಣಿಮೆ ಬಂದರೆ ಅದನ್ನು ‘ಬ್ಲೂ ಮೂನ್’ ಎಂದು ಕರೆಯಲಾಗುತ್ತದೆ. ಜನವರಿ 1ರಂದೂ ಪೂರ್ಣ ಹುಣ್ಣಿಮೆ ಬಂದಿತ್ತು.

ಅಂದಹಾಗೆ 2018ರ ಮೊದಲ ಗ್ರಹಣ ಇದು. ಗ್ರಹಣದ ಅವಧಿ 77 ನಿಮಿಷಗಳು. ಫೆಸಿಫಿಕ್ ಸಾಗರ ಪ್ರದೇಶದಲ್ಲಿ ಮಧ್ಯರಾತ್ರಿ ವೇಳೆ ಇದು ಸಂಭವಿಸಲಿದೆ.

ಡಿಸೆಂಬರ್ 31, 2009ರಲ್ಲೂ ‘ಬ್ಲೂ ಮೂನ್ ಎಕ್ಲಿಪ್ಸ್’ ಸಂಭವಿಸಿತ್ತು. ಆದರೆ ಅದರ ಪ್ರಮಾಣ ಶೇ 8ರಷ್ಟು ಮಾತ್ರ ಇತ್ತು. ಸಂಪೂರ್ಣ ಬ್ಲೂ ಮೂನ್ ಎಕ್ಲಿಪ್ಸ್ ಆಗಿದ್ದು 1866ರ ಮಾರ್ಚ್ 31ರಂದು. ಇದಾದ ನಂತರ ಈಗ ಅಂದರೆ 152 ವರ್ಷಗಳ ಬಳಿಕ ಈ ಗ್ರಹಣ ಸಂಭವಿಸಲಿದೆ.

ADVERTISEMENT

ಡಿಸೆಂಬರ್ 31, 2028 ಮತ್ತು ಜನವರಿ 31, 2037ರಲ್ಲಿ ಮತ್ತೆ ‘ಬ್ಲೂ ಮೂನ್ ಎಕ್ಲಿಪ್ಸ್’ ಸಂಭವಿಸಲಿದೆ.

*
ಒಂದೇ ತಿಂಗಳಲ್ಲಿ ಎರಡು ಹುಣ್ಣಿಮೆ ಬಂದಾಗ ಎರಡನೆಯ ಹುಣ್ಣಿಮೆಗೆ ‘ಬ್ಲೂ ಮೂನ್‌’ ಎನ್ನುತ್ತಾರೆ. ಆದರೆ ಚಂದ್ರನ ಬಣ್ಣ ನೀಲಿಯಾಗಿ ಕಾಣಿಸುವುದಿಲ್ಲ.
–ಡಾ. ಬಿ.ಎಸ್‌. ಶೈಲಜಾ, ನೆಹರೂ ತಾರಾಲಯದ ನಿರ್ದೇಶಕಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.