ADVERTISEMENT

ಬಾಹ್ಯಾಕಾಶ ಯಾನಿಗಳಿಗೆ ಎಚ್ಚರಿಕೆ

ನಾಸಾದ ಬಾಹ್ಯಾಕಾಶ ಯಾನಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2018, 18:12 IST
Last Updated 26 ಜೂನ್ 2018, 18:12 IST

ಲಂಡನ್ (ಪಿಟಿಐ): ಭೂಮಿಯ ಆಚೆಗೆ ಪ್ರಯಾಣಿಸುವವರಿಗೆ ಅವಕಾಶ ಕಲ್ಪಿಸಿಕೊಡುವಬಾಹ್ಯಾಕಾಶ ಪ್ರವಾಸೋದ್ಯಮ ಕಂಪನಿಗಳು, ಈ ನಿಟ್ಟಿನಲ್ಲಿ ಅವರು ಮಾಡಿಕೊಳ್ಳಬೇಕಿರುವ ಸಿದ್ಧತೆ ಕುರಿತು ಮಾತ್ರ ಗಮನಹರಿಸುವುದಿಲ್ಲ ಎಂದು ನಾಸಾದ ಬಾಹ್ಯಾಕಾಶ ಯಾನಿಯೊಬ್ಬರು ಹೇಳಿದ್ದಾರೆ.

ಶ್ರಮದಾಯಕವಾಗಿರುವ ಬಾಹ್ಯಾಕಾಶ ಯಾನಕ್ಕೆ ಸೂಕ್ತ ರೀತಿಯಲ್ಲಿ ಸಿದ್ಧರಾಗದೇ ಹೋದರೆ ಅದು ಯಾನಿಗಳ ದೇಹದ ಮೇಲೆ ಪರಿಣಾಮ ಬೀರುತ್ತದೆ ಎಂದು, ಬಾಹ್ಯಾಕಾಶ
ದಲ್ಲಿ ಮಗುವಿಗೆ ಜನ್ಮ ನೀಡಿದ ಮೊದಲ ಮಹಿಳೆ ಹಾಗೂ ನಾಸಾದ ಬಾಹ್ಯಾಕಾಶ ಯಾನಿ ಅನ್ನಾ ಫಿಶರ್ ಎಚ್ಚರಿಕೆ ನೀಡಿದ್ದಾರೆ.

‘1984ರಲ್ಲಿ ಡಿಸ್ಕವರಿ ಬಾಹ್ಯಾಕಾಶ ಯಾನದ ಮೊದಲ ಎರಡು ದಿನ ನಾನು ಅಸ್ವಸ್ಥಳಾಗಿದ್ದೆ.ಇದು ಖಂಡಿತಾ ಸಾಮಾನ್ಯವಿಮಾನಯಾನದ ರೀತಿ ಅಲ್ಲ. ಸಾಕಷ್ಟು ಹಣ ನೀಡಿ ಪ್ರಯಾಣಿಸುವವರು ಈ ಯಾನದ ಅನುಭವವನ್ನು ಪ್ರಶಂಸಿಸದೆ ಇರಬಹುದು’ ಎಂದು ಅವರು ಹೇಳಿದ್ದಾರೆ.

ADVERTISEMENT

ಗಂಭೀರ ಪರಿಣಾಮ: ಸೂಕ್ಷ್ಮಗುರುತ್ವಾಕರ್ಷಣವು ಜೀರ್ಣಕ್ರಿಯೆ, ದೇಹದ ಉಷ್ಣಾಂಶ ನಿಯಂತ್ರಣ, ಹೃದಯದ ಬಡಿತ, ಮೂಳೆಯ ಸಾಂದ್ರತೆ, ದೃಷ್ಟಿ ಹಾಗೂ ಉಸಿರಾಟದ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂಬುದು ಈಗಾಗಲೇ ತಿಳಿದಿರುವ ಸಂಗತಿಯಾಗಿದೆ.

ಭೂಮಿಯಿಂದ ಆಚೆಗೆ ಪ್ರಯಾಣಿಸದೇ ಇರುವವರು ಅಥವಾ ಬಾಹ್ಯಾಕಾಶದ ಕೆಳಹಂತದ ಕಕ್ಷೆಗಳಿಗೆ ತೆರಳಿದವರಿಗಿಂತ, ಚಂದ್ರಯಾನ ಕೈಗೊಂಡ ಬಾಹ್ಯಾಕಾಶ ಯಾನಿಗಳು ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಡುವ ಸಾಧ್ಯತೆ ಐದು ಪಟ್ಟು ಹೆಚ್ಚಾಗಿರುತ್ತದೆ ಎಂದು 2016ರಲ್ಲಿ ಅಮೆರಿಕದಲ್ಲಿ ನಡೆದ ಸಂಶೋಧನೆಯೊಂದು ಪತ್ತೆ ಮಾಡಿದೆ.ಈವರೆಗೆರಷ್ಯಾದ ಬಾಹ್ಯಾ ಕಾಶ ಸಂಸ್ಥೆ ‘ರಾಸ್‌ಕಾಸ್ಮೊಸ್’ ಮಾತ್ರ ಜನರಿಗೆ ಬಾಹ್ಯಾಕಾಶ ಪ್ರವಾಸ ಕಲ್ಪಿಸಿದ್ದು, 2001ರಿಂದ 2009ರ ಅವಧಿವರೆಗೆ ಪ್ರವಾಸಿಗರುಬಾಹ್ಯಾಕಾಶಕ್ಕೆ ಭೇಟಿ ನೀಡಿದ್ದರು.

ಮುಂಗಡ ಟಿಕೆಟ್: ಬ್ಲೂ ಆರಿಜಿನ್, ವರ್ಜಿನ್ ಗೆಲಾಕ್ಟಿಕ್ ಹಾಗೂ ಸ್ಪೇಸ್ಎಕ್ಸ್ ಸಂಸ್ಥೆಗಳು ಇನ್ನು ಕೆಲವು ವರ್ಷಗಳಲ್ಲಿ ಬಾಹ್ಯಾಕಾಶ ಪ್ರವಾಸ ಆರಂಭಿಸುವ ನಿರೀಕ್ಷೆ ಇದೆ. ಹಾಲಿವುಡ್ ಕಲಾವಿದರಾದ ಏಂಜೆ
ಲಿನಾ ಜೋಲಿ, ಕೇಟ್ ವಿನ್ಸ್‌ಲೆಟ್ ಸೇರಿದಂತೆ ಹಲವರು ಈ ಪ್ರವಾಸಕ್ಕಾಗಿ ಟಿಕೆಟ್ ಖರೀದಿಸಿದ್ದಾರೆ.

ಸೌರ ಮತ್ತು ಅನ್ಯಗ್ರಹಗಳ ವಿಕಿರಣ ಕುರಿತು ಬಾಹ್ಯಾಕಾಶ ಸಂಸ್ಥೆಗಳು ಇನ್ನೂ ಆತಂಕ ಹೊಂದಿದ್ದು, ಮಂಗಳ ಹಾಗೂ ಚಂದ್ರ ಗ್ರಹಗಳಿಗೆ ದೀರ್ಘಾವಧಿ ಭೇಟಿ ನೀಡುವ ಯಾನಿಗಳನ್ನು ಇದರಿಂದ ರಕ್ಷಿಸುವ ಮಾರ್ಗ ಕಂಡುಕೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.