ADVERTISEMENT

ತರಕಾರಿ ಹೀಗೂ ಬೆಳೆಯಬಹುದು

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2017, 19:30 IST
Last Updated 6 ಏಪ್ರಿಲ್ 2017, 19:30 IST
ತರಕಾರಿ ಹೀಗೂ ಬೆಳೆಯಬಹುದು
ತರಕಾರಿ ಹೀಗೂ ಬೆಳೆಯಬಹುದು   
ಮನೆಯಲ್ಲಿಯೇ ತರಕಾರಿ ಬೆಳೆದುಕೊಳ್ಳುವ ಆಲೋಚನೆ ಇತ್ತೀಚೆಗೆ ಹೆಚ್ಚುತ್ತಿದೆ. ನಾವೇ ಬೆಳೆದು ಅದನ್ನು ತಿನ್ನುವಲ್ಲಿ ಇರುವ ಖುಷಿಯೇ ಬೇರೆ. ಮನೆಯ ಸೌಂದರ್ಯ ಹೆಚ್ಚಿಸುವಲ್ಲಿಯೂ ಇವುಗಳ ಪಾತ್ರವಿದೆ. ಆದರೆ ಹಲವರಿಗೆ  ಪುಟ್ಟ ಸ್ಥಳದಲ್ಲಿ ಕೈತೋಟ ಮಾಡುವುದು ಹೇಗೆ ಎಂಬ ಗೊಂದಲವಿರುತ್ತದೆ.
 
ಇವುಗಳಿಗೆ ಪರಿಹಾರ ಒದಗಿಸಿದೆ ಬಜ್‌ಫೀಡ್‌. ಅಡುಗೆಗೆ ಬಳಸುವ ತರಕಾರಿಗಳನ್ನು ಯಾವ ಆಕಾರದಲ್ಲಿ ಕತ್ತರಿಸಿ, ಅದನ್ನು ಹೇಗೆ ಬೆಳೆಸಬೇಕು ಎನ್ನುವ ಮಾಹಿತಿಯನ್ನೊಳಗೊಂಡ ವಿಡಿಯೊವನ್ನು ಅದು ಪೋಸ್ಟ್‌ ಮಾಡಿದೆ.
 
ಎಲೆಕೋಸಿನ ಗೆಡ್ಡೆಯ ತಳಭಾಗವನ್ನು ಎರಡು ಇಂಚು ಕತ್ತರಿಸಬೇಕು,  ಅರ್ಧ ಇಂಚು ನೀರಿರುವ ಗಾಜಿನ ಲೋಟವೊಂದರಲ್ಲಿ ಹಾಕಿ, ಬಿಸಿಲು ಬರುವ ಸ್ಥಳದಲ್ಲಿ ಇಡಬೇಕು. ಆ ನೀರನ್ನು ಪ್ರತಿದಿನ ಬದಲಾಯಿಸಬೇಕು. ಐದು ದಿನದ ನಂತರ ಅದರಲ್ಲಿ ಎಲೆಗಳು ಬೆಳೆಯುವುದು ಕಾಣುತ್ತದೆ.

ನಂತರ ಅದನ್ನು ಕುಂಡದಲ್ಲಿ ಬೆಳೆಸುವುದು ಹೇಗೆ ಎಂಬುದನ್ನು ವಿಡಿಯೊ ನೋಡಿ ತಿಳಿಯಬಹುದು.  ಬೆಳ್ಳುಳ್ಳಿ, ಪುದೀನಾ, ಈರುಳ್ಳಿ ಹೇಗೆ ಬೆಳೆಯುವುದು ಎಂಬ ವಿವರವೂ ಇದರಲ್ಲಿದೆ.
 
ಈ ವಿಡಿಯೊ ನೋಡುವಾಗ ಇಷ್ಟು ಸುಲಭವಾಗಿ ಗಿಡವನ್ನು ಬೆಳೆಯಬಹುದೇ ಎನಿಸುತ್ತದೆ. ಒಂದು ಕುಂಡದಲ್ಲಿ ಮೂರು, ನಾಲ್ಕು ಬಗೆಯ ತರಕಾರಿ ಬೆಳೆಯುವುದು ಹೇಗೆ ಎಂಬುದನ್ನು ಇದರಲ್ಲಿ ತಿಳಿಸಲಾಗಿದೆ. ಇಪ್ಪತ್ತೆರಡೂ ಕೋಟಿಗೂ ಹೆಚ್ಚು ಮಂದಿ ಈ ವಿಡಿಯೊ ವೀಕ್ಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.