ADVERTISEMENT

ವೃತ್ತಾಕಾರದ ರನ್‌ವೇ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2017, 19:30 IST
Last Updated 6 ಏಪ್ರಿಲ್ 2017, 19:30 IST
ವೃತ್ತಾಕಾರದ ರನ್‌ವೇ
ವೃತ್ತಾಕಾರದ ರನ್‌ವೇ   
ವೃತ್ತಾಕಾರದ ರನ್‌ವೇ ಕುರಿತ ಹೊಸ ಸಂಶೋಧನೆಯೊಂದು ವೈಮಾನಿಕ ಕ್ಷೇತ್ರದಲ್ಲಿ ಸಂಚಲವನ್ನೇ ಮೂಡಿಸಿದೆ. ಪ್ರಸ್ತುತ ಬಳಕೆಯಲ್ಲಿರುವ ರನ್‌ವೇಗಳು ನೇರವಾಗಿರುವುದರಿಂದ ವಿಮಾನಗಳಿಗೆ ಹೆಚ್ಚು ಸ್ಥಳ ಬೇಕು. ವೃತ್ತಾಕಾರದ ರನ್‌ವೇಗಳು ಸ್ಥಳದ ಅಗತ್ಯವನ್ನು ಕಡಿಮೆ ಮಾಡಿವೆ.
 
ಈ ಪರಿಕಲ್ಪನೆಯ ರೂವಾರಿ ನೆದರ್‌ಲ್ಯಾಂಡ್‌ನ ಹೆನ್ಕ್‌ ಹೆಸ್‌ಲಿಂಕ್‌. ‘ದಿ ನೆದರ್‌ಲ್ಯಾಂಡ್‌ ಏರೊಸ್ಪೆಸ್‌ ಸೆಂಟರ್‌’ನಲ್ಲಿ ಇವರು ಸಂಶೋಧನೆ ನಡೆಸಿದ್ದಾರೆ. ಯುರೋಪಿಯನ್‌ ಕಮಿಷನ್‌ ಇವರ ಸಂಶೋಧನೆಗೆ ಅನುದಾನ ನೀಡಿದೆ. 
 
ಅವರು ತಮ್ಮ ಈ ಸಂಶೋಧನೆ ಕುರಿತು ವಿವರಿಸುವುದು ಹೀಗೆ...
 
‘ನೇರವಾದ ರನ್‌ವೇ ಹೆಚ್ಚು ಸ್ಥಳವನ್ನು ಬೇಡುತ್ತದೆ. ಅಲ್ಲದೆ ಮತ್ತೊಂದು ವಿಮಾನ ಬರಲು ಅವಕಾಶವಿರುವುದಿಲ್ಲ.   ಅದೇ ವೃತ್ತಾಕಾರವಿದ್ದಾಗ ನಾಲ್ಕು ಸರ್ಕಲ್‌ನಲ್ಲಿ ನಾಲ್ಕು ರನ್‌ವೇ ಇರುತ್ತದೆ. ಇದರಿಂದ ಸ್ಥಳದ ಬೇಡಿಕೆಯೂ ಕಡಿಮೆಯಾಗುತ್ತದೆ. 
 
‘ನೇರವಾಗಿ ಹೋಗುವಾಗ ವಿಮಾನದ ವೇಗ ಹೆಚ್ಚಿರುತ್ತದೆ. ಅದೇ ವೃತ್ತಾಕಾರದಲ್ಲಿ ತಿರುಗಿದಾಗ ಅದರ ವೇಗ ಕಡಿಮೆಯಾಗುತ್ತದೆ. ನೇರವಾಗಿ ಹೋಗುವುದರಿಂದ ವಿಮಾನ ಲ್ಯಾಂಡ್‌ ಆಗುವ ಸಂದರ್ಭದಲ್ಲಿ ಗಾಳಿಯಲ್ಲಿ ತೇಲಿದ ಅನುಭವವಾಗುತ್ತದೆ.
 
ಆದರೆ ಇಲ್ಲಿ ಗಾಳಿ ನೇರವಾಗಿ ಹೊಡೆಯುವುದಿಲ್ಲ. ಇದು ಇಂಧನ ಮಿತವ್ಯಯಕ್ಕೂ ನೆರವಾಗುತ್ತದೆ. ನಾಲ್ಕು  ನೇರ ರನ್‌ವೇಗೆ ಒಂದು ವೃತ್ತಾಕಾರದ ರನ್‌ವೇ ಸಮ’. 
ಲಿಂಕ್: http://bit.ly/2nf9qMB v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.