ಮನೆ ನಿರ್ಮಾಣ ಮುಗಿದ ತಕ್ಷಣ ಮನೆಗೆ ಏನೆಂದು ಹೆಸರಿಡುವುದು ಎಂಬ ಚರ್ಚೆ ಆರಂಭವಾಯಿತು. ಮನೆ ಮಂದಿಯೆಲ್ಲ ಒಂದೊಂದು ಹೆಸರು ಸೂಚಿಸಿದರು. ಆದರೆ ಮನೆಗೆ ಕನ್ನಡದ್ದೇ ಹೆಸರಿಡಬೇಕು ಜೊತೆಗೆ ಆ ಹೆಸರು ಚಿಕ್ಕದಾಗಿರಬೇಕು ಎಂಬುದು ಎಲ್ಲರ ಅಭಿಪ್ರಾಯವಾಗಿತ್ತು.
ಎಲ್ಲಾ ಸೇರಿ ‘ಸಿರಿ’ ಎಂಬ ಹೆಸರನ್ನು ಆಯ್ಕೆ ಮಾಡಿದೆವು. ಸಿರಿ ಎಂಬ ಪದಕ್ಕೆ ನಾನಾ ಅರ್ಥಗಳಿವೆ ಎಂಬುದು ಈ ಆಯ್ಕೆಗೆ ಕಾರಣ.
ಮನೆಯ ಹೆಸರು ಆಕರ್ಷಕವಾಗಿ ಕಾಣಬೇಕು ಎಂಬುದನ್ನು ಮೊದಲೇ ಕಲಾವಿದನಿಗೆ ತಿಳಿಸಿದೆವು. ‘ಸಿ’ ಅಕ್ಷರಕ್ಕೆ ಮಂಡಿ ಮಡಚಿ ಮಹಿಳೆ ಕುಳಿತಿರುವ ಆಕಾರ ನೀಡಿದರು. ಆಕಾಶ, ಬೆಂಕಿ, ಸೂರ್ಯ, ನಕ್ಷತ್ರಗಳ ಮಧ್ಯದಲ್ಲಿರುವ ‘ಸಿರಿ’ ಮನೆಗೆ ಮತ್ತಷ್ಟು ಮೆರುಗು ನೀಡಿದೆ.
-ಡಾ.ಪದ್ಮಿನಿ ನಾಗರಾಜು, ಬನಶಂಕರಿ
ನಿಮ್ಮ ಮನೆ ಹೆಸರಿನ ಕಥೆ ನಮಗೆ ತಿಳಿಸಿ. ವಾಟ್ಸ್ಆ್ಯಪ್– 9513322931
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.