ADVERTISEMENT

ಸೋಫಾಗೆ ಕುಶನ್‌ ಆಯ್ಕೆ ಮಾಡುವ ಮೊದಲು

ಶೋಭಾ ವಿ.
Published 5 ಜನವರಿ 2017, 19:30 IST
Last Updated 5 ಜನವರಿ 2017, 19:30 IST
ಸೋಫಾಗೆ ಕುಶನ್‌ ಆಯ್ಕೆ ಮಾಡುವ ಮೊದಲು
ಸೋಫಾಗೆ ಕುಶನ್‌ ಆಯ್ಕೆ ಮಾಡುವ ಮೊದಲು   

ಮನೆ ಎಂಬುದು ಸುಂದರವಾಗುವುದು ನಾವು ಅಂದುಕೊಂಡ ಹಾಗೆ ಅಲಂಕರಿಸಿದಾಗ ಮಾತ್ರ.  ಸಾಕಷ್ಟು ಹಣ ಖರ್ಚು ಮಾಡಿ ಕಟ್ಟಿಸಿರುವ ಮನೆ ಚೆಂದವಾಗಿ ಕಾಣಲಿಲ್ಲ ಎಂದಾಗ ಮಾಡಿದ ಪ್ರಯತ್ನ ವ್ಯರ್ಥವಾಗುತ್ತದೆ.

ನಮ್ಮ ಅಭಿರುಚಿ ಮತ್ತು ಆಯ್ಕೆಯ ಮಿಶ್ರಣದಿಂದ ಮನೆಯ ಒಳಾಂಗಣವನ್ನು ಅಂದಗಾಣಿಸಬಹುದು. ಅಲಂಕಾರಿಕ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಪೀಠೋಪಕರಣಗಳ ಆಯ್ಕೆಯನ್ನು ನಾಜೂಕಿನಿಂದ ಮಾಡುವುದು ಮುಖ್ಯ. ಲಿವಿಂಗ್‌ ರೂಮ್‌ ಮನೆಯ ಮುಖ್ಯಭಾಗ. ಹೀಗಾಗಿ ಅಲ್ಲಿ ಜೋಡಿಸುವ ಪ್ರತಿ ವಸ್ತುಗಳನ್ನೂ ಕಾಳಜಿಯಿಂದ ಆಯ್ದುಕೊಳ್ಳಬೇಕಾಗುತ್ತದೆ.

ಮನೆಯಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ವಿಶ್ರಾಂತಿ ಪಡೆಯಲು ದಿವಾನ, ತರಹೇವಾರಿ ಕುರ್ಚಿಗಳು, ಸೋಫಾ ಇನ್ನಿತರ ವಸ್ತುಗಳ ಮೊರೆ ಹೋಗುತ್ತೇವೆ. ಅದರಲ್ಲೂ ಇತ್ತೇಚೆಗೆ ಸೋಫಾದ ಭರಾಟೆ ಹೆಚ್ಚಾಗಿದೆ. ಬಂದ ಅತಿಥಿಗಳ ಆಕರ್ಷಿಸಲಷ್ಟೇ ಅಲ್ಲದೆ, ಮನೆಯವರ ಸೌಕರ್ಯಕ್ಕೂ ಹೆಚ್ಚು ಸೂಕ್ತ ಎನ್ನಬಹುದು.

ಅತ್ಯಂತ ದುಬಾರಿಯಿಂದ ಹಿಡಿದು ಅವರವರ ಬಜೆಟ್‌ಗೆ ತಕ್ಕ ಹಾಗೆ ಸೋಫಾಗಳು ಕೈಗೆಟುಕುವ ಬೆಲೆಯಲ್ಲಿ  ಸಿಗುತ್ತಿವೆ. ಸರಿಯಾದ ರೀತಿಯಲ್ಲಿ ಆಯ್ಕೆ ಮಾಡುವುದರೊಂದಿಗೆ, ಕೊಟ್ಟ ಹಣಕ್ಕೆ ದೀರ್ಘ ಕಾಲಿಕ ಬಾಳಿಕೆಯು ಬರಬೇಕು ಎಂಬುದು ಖರೀದಿದಾರರ ಆದ್ಯತೆ ಕೂಡ ಹೌದು.

ಒಳಾಂಗಣದ ಜಾಗವನ್ನು ನೋಡಿ ಸೋಫಾ ಆಯ್ಕೆ ಮಾಡಬೇಕು. ಅಂದದ ಸೋಫಾ ಖರೀದಿ ಜೊತೆಗೆ ಎಂಥ ಕವರ್‌ ಹಾಕಿಸುತ್ತೇವೆ ಎನ್ನುವುದೂ ಸೋಫಾ ಬಾಳಿಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಲೆದರ್‌ ಮತ್ತು ಫ್ಯಾಬ್ರಿಕ್‌ ಒಂದು ರೀತಿ ಉತ್ತಮ ಎನ್ನಬಹುದು. ಕೆಲವರಂತು ಫ್ಯಾಬ್ರಿಕ್‌ ಸ್ಪರ್ಶ ವೈವಿಧ್ಯತೆಯನ್ನು ನೋಡಿ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಅದರ ನಿರ್ವಹಣೆ ಬಹಳ ಮುಖ್ಯ

*ಫ್ಯಾಬ್ರಿಕ್‌ ಸೋಫಾಗಳನ್ನು ಪ್ರತಿನಿತ್ಯ ವ್ಯಾಕ್ಯೂಮ್‌ ಕ್ಲೀನರ್‌ಗಳಿಂದ ಸ್ವಚ್ಭಗೊಳಿಸಬೇಕು.

*ಕಲೆಯಾದರೆ ಮಾಮೂಲಿ ಕ್ಲೀನರ್‌ಗಳಿಗಿಂತ ಕಿಂಗ್‌ ಕೇರ್‌ ಫ್ಯಾಬ್ರಿಕ್‌ ಕ್ಲೀನರ್‌ ಬಳಸಿ ಸ್ವಚ್ಛಗೊಳಿಸುವುದು ಒಳಿತು. ಇದರಿಂದ ಬಣ್ಣ ಹಾಳಾಗುವುದಿಲ್ಲ.

*ನಿಯಮಿತವಾಗಿ ಸೋಫಾ ಕ್ಲೀನ್‌ ಮಾಡುವುದರಿಂದ ಪಿಲ್ಲಿಂಗ್‌ ಬರುವುದನ್ನು ತಡೆಯಬಹುದು. ಹಾಗೇನಾದರೂ ಬಂದರೆ ಫ್ಯಾಬ್ರಿಕ್‌ ಪಿಲ್ಲಿಂಗ್‌ ರಿಮೂವರ್‌ ಬಳಸಿ ತೆಗೆದುಹಾಕಬಹುದು.

*ನೀರಿನಂಶ ಬಿದ್ದರೆ ಕ್ಲೀನ್‌ ಮಾಡುವುದು ಬಹಳ ಸುಲಭ. ಮತ್ತು ಬಹಳ ವೇಗವಾಗಿ ಒಣಗಿಸಬಹುದು.

ಕುಶನ್‌ ಆರಿಸಿಕೊಳ್ಳುವ ಮೊದಲು
*ಸೋಫಾ ಮತ್ತು ದಿವಾನಾಗಳಿಗೆ ಮತ್ತಷ್ಟು ಮೆರುಗು  ನೀಡುವುದಕ್ಕೆ ಕುಶನ್‌ಗಳ ಆಯ್ಕೆಯನ್ನು ಮಾಡಬಹುದು.

*ಇನ್ನು ಆಧುನಿಕ ಕಾಲಕ್ಕೆ ಹೊಂದುವ  ಕ್ರೆಸೆಂಟ್‌ ಶೇಪ್‌ ಕುಶನ್‌, ಝೆನ್‌ ಮೆಡಿಟೇಷನ್‌ ಕುಶನ್‌, ಜಪಾನೀಸ್‌ ಝಬುಟನ್‌ ಹೀಗೆ ಹಲವಾರು ವಿವಿಧ ಕುಶನ್‌ಗಳು ಸಿಗುತ್ತವೆ.

*ಕುಶನ್‌ ವಿನ್ಯಾಸಗಳಲ್ಲೂ ಆಯ್ಕೆಗೆ ಅವಕಾಶವಿದೆ. ಅಲ್ಲದೆ ನಮ್ಮ ಕರಕುಶಲ ಕೈಚಳಕವನ್ನು ಸಹ ಕುಶನ್‌ ಅಲಂಕಾರದಲ್ಲಿ ತೋರ್ಪಡಿಸಬಹುದು.

*ಕೆಲ ಗೃಹಿಣಿಯರು ಸುಮ್ಮನೆ ಕೂರದೆ ತಮ್ಮ ಕಲಾ ಚಟುವಟಿಕೆಗಳನ್ನು ಮನೆಯ ಅಂದಕ್ಕೆ ಮೀಸಲಿರಿಸುತ್ತಾರೆ. ಕುಶನ್‌ನ್ನು ತಮ್ಮ ಇಷ್ಟಕ್ಕೆ ತಕ್ಕಂತೆ ಮಣಿ, ಸಿಲ್ಕ್‌, ಚುಮುಕಿ, ಎಂಬ್ರಾಯ್ಡರಿ ವರ್ಕ್‌, ಸ್ಟೋನ್‌, ವಿವಿಧ ರೀತಿಯ ಚಿತ್ರಗಳನ್ನು ರೂಪಿಸಿ ಮತ್ತಷ್ಟು ಮೆರುಗು ನೀಡುತ್ತಾರೆ.

*ಮರದಿಂದ ತಯಾರಿಸಿದ ಸೋಫಾ ಹೆಚ್ಚು ಬಾಳಿಕೆ ಬರುವುದರಿಂದ ಕೆಲವರು ಮರದ ಸೋಫಾಗಳ ಮೊರೆ ಹೋಗುತ್ತಾರೆ.

*ಹೆಚ್ಚು ಮಂದಿ ಇರುವ ಮನೆಗಳಲ್ಲಿ  3 ಇನ್‌ ಒನ್‌ ಸೋಫಾ, 8 ಸಿಟಿಂಗ್‌ ಇರುವುದನ್ನು ಖರೀದಿಸುವುದು ಉತ್ತಮ.

*ಎಲ್‌ ವಿನ್ಯಾಸ,  ಲಾಂಜರ್‌, ಕಾರ್ನರ್‌ ಸೋಫಾ,  ಪಾಲಿ ಬ್ಯಾಗ್‌,  ಹೈಬ್ಯಾಗ್‌ ಸೋಫಾ ಇನ್ನು ಮುಂತಾದ  ಆಯ್ಕೆಗಳು ಸೋಫಾದಲ್ಲಿವೆ.

*ಸೆಕ್ಷನಲ್‌ ಸೋಫಾ, ಚೆಸ್ಟೊಫೀಲ್ಡ್‌, ಲಾಸನ್‌ ಸ್ಟೈಲ್‌, ಕಂಟೆಂಪರರಿ ಮಿಡ್‌ ಸೆಂಚುರಿ ಮಾಡರ್ನ್‌, ಇಂಗ್ಲಿಷ್‌, ಬ್ರಿಜ್‌ ವಾಟರ್‌, ಕ್ಯಾಮಲ್‌ ಬ್ಯಾಕ್‌, ಕ್ಯಾಬ್ರಿಯೋಲ್‌, ಚೈಸ್‌ಲಾಂಚ್‌, ಸ್ಲೀಪರ್‌ ಸೋಫಾಸ್‌, ಪುಲ್‌ಔಟ್‌ ಸೋಫಾಬೆಡ್‌, ಫ್ಯೂಟಾನ್‌, ಡೇಬೆಡ್‌, ಬಂಕ್‌ ಬೆಡ್‌ ಸ್ಲೀಪರ್‌, ಲವ್‌ಸೀಟ್‌ ಸೋಫಾ, ದಿವಾನ್‌, ಸೆಟ್‌ ಸೋಫಾ ಹಲವಾರು ವಿಧಗಳಲ್ಲಿ ಸಿಗುತ್ತವೆ. 

*
ಹತ್ತಿ ಬಟ್ಟೆ ಸೋಫಾಗಳನ್ನು ನಾನು ಹೆಚ್ಚು ಆಯ್ಕೆ ಮಾಡುತ್ತೇನೆ. ಕಂಫರ್ಟ್ ಮತ್ತು ಡಿಸೈನ್‌ಗೆ ಅವಕಾಶ ಇರುವುದರಿಂದ ಜನರು ಹತ್ತಿ ಬಟ್ಟೆಗಳ ಕವರ್‌ ಅನ್ನೇ  ಹೆಚ್ಚು ಇಷ್ಟಪಡುತ್ತಾರೆ. ಮನೆಯ ಬಣ್ಣವನ್ನು ನೋಡಿ ಸೋಫಾಗಳ ಕಲರ್‌ ಆಯ್ಕೆ ಮಾಡುವುದು ಒಳಿತು.
–ಜೈ ಪ್ರಕಾಶ್‌ ಅಗರ್‌ವಾಲ್‌,
ಫೋರ್‌ ಸ್ಕ್ವೇರ್‌ ಡಿಕೊರ್‌ ಕಂಪೆನಿಯ ಮಾಲಿಕ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.