ADVERTISEMENT

ಮಂಗಳವಾರ, 12–9–1967

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2017, 19:30 IST
Last Updated 11 ಸೆಪ್ಟೆಂಬರ್ 2017, 19:30 IST

ಸಿಕ್ಕಿಂ ಗಡಿಯಲ್ಲಿ ಚೀನಿ ಗುಂಡೇಟು

ಸಿಕ್ಕಿಂ, ಸೆ. 11– ಸಿಕ್ಕಿಂ ಗಡಿಯ ನಾಥು ಲಾ ಬಳಿ ಕಾವಲಿರುವ ಭಾರತೀಯ ಪಡೆಗಳ ಮೇಲೆ ಸಿಕ್ಕಿಂ ಗಡಿಯ ಆಚೆಯಿಂದ ಚೀನಿ ಸೈನಿಕರು ಇಂದು ಬೆಳಿಗ್ಗೆ
ಬಂದೂಕ ಮತ್ತು ಮೆಷಿನ್ ಗನ್‌ಗಳಿಂದ, ಆನಂತರ ಮಾರ್ಟರ್ ಮತ್ತು ಫಿರಂಗಿಗಳಿಂದ ಗುಂಡು ಹಾರಿಸಿದರು.

ಸಿಕ್ಕಿಂ ಗಡಿಯಲ್ಲಿ ಚೀನಿ ಸೈನಿಕರುಈಚೆಗೆ ನಡೆಸಿರುವ ಅತ್ಯುಗ್ರ ಪ್ರಚೋದನೆಯಿದು. ಚೀನಿ ಸೈನಿಕರ ಗುಂಡಿನ ದಾಳಿಗೆ ಪ್ರತಿಯಾಗಿ ಭಾರತೀಯ ಸೈನಿಕರು ಗುಂಡು ಹಾರಿಸಿದರೆಂದು ಅಧಿಕೃತ ವರದಿಗಳಿಂದ ತಿಳಿದು ಬಂದಿದೆ.

ADVERTISEMENT

**

ತುಂಡು ಲಂಗ ತೊಟ್ಟರೆ ಸಂಧಿ ವಾತರೋಗ

ಬೆಲ್ಗ್ರೇಡ್, ಸೆ. 11– ತುಂಡು ಲಂಗ ಧರಿಸುವುದರಿಂದ ಸಂಧಿವಾತ ರೋಗ ಬರುತ್ತದೆ, ಆರ್ಥಿಕ ವ್ಯವಸ್ಥೆಗೂ ಧಕ್ಕೆ ಉಂಟಾಗುತ್ತದೆ, ನೀತಿಯು ಸಡಿಲವಾಗುತ್ತದೆ, ಈ ಕಾರಣಗಳಿಗಾಗಿ ಅದನ್ನು ಶಾಸನದ ಮೂಲಕ ಬಹಿಷ್ಕರಿ ಸಬೇಕು ಎಂಬುದು ಯುಗೋಸ್ಲಾವಿಯ ಪತ್ರಿಕೆಯೊಂದರ ಸಮರ್ಥನೆ.

‘ಸ್ಟೇಟ್’ ಎಂಬ ವಾರಪತ್ರಿಕೆಯೊಂದರಲ್ಲಿ ಈ ವಾದವನ್ನು ಸಮರ್ಥಿಸಿ ಬರೆದಿರುವ ಮಹಿಳಾ ಲೇಖಕಿಯೊಬ್ಬರು ತುಂಡು ಲಂಗ ಧರಿಸುವುದರ ವಿರುದ್ಧ ನಾಲ್ಕಂಶಗಳನ್ನು ಸ್ಪಷ್ಟಪಡಿಸಿದ್ದಾರೆ.

**

ತ್ರಿಭಾಷಾ ಸೂತ್ರ ದೇಶದ ಅಗತ್ಯಗಳ ಪೂರೈಕೆಗೆ ಅವಶ್ಯಕ 

ನವದೆಹಲಿ, ಸೆ. 11– ಎಲ್ಲ ಅಂಶಗಳನ್ನೂ ಗಣನೆಗೆ ತೆಗೆದುಕೊಂಡು ತ್ರಿಭಾಷಾ ಸೂತ್ರವನ್ನು ರಚಿಸಲಾಗಿದೆ ಎಂದೂ, ‘ನಮ್ಮ ಅಗತ್ಯಗಳನ್ನು ಪೂರೈಸಬಲ್ಲ ಬದಲು ವ್ಯವಸ್ಥೆ’ ಕಾಣದೆಂದೂ ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿ ಅವರು ಇಂದು ಇಲ್ಲಿ ತಿಳಿಸಿದರು. ವಿಶ್ವವಿದ್ಯಾನಿಲಯ ಉಪಕುಲಪತಿಗಳ ಐದನೆಯ ಸಮ್ಮೇಳನವನ್ನು ಅವರು ಉದ್ಘಾಟಿಸಿದರು.

**

ಪ್ರದೇಶ ಭಾಷೆಯಲ್ಲಿ ವಾರ್ಸಿಟಿ ಶಿಕ್ಷಣ ಅನಿವಾರ್ಯ ಎಂದು ತ್ರಿಗುಣ ಸೇನ್

ನವದೆಹಲಿ, ಸೆ. 11– ವಿಶ್ವವಿದ್ಯಾನಿಲಯಗಳಲ್ಲಿ ಪ್ರಾದೇಶಿಕ ಭಾಷೆ ಶಿಕ್ಷಣ ಮಾಧ್ಯಮವಾಗುವುದು ಅನಿವಾರ್ಯವೆಂದೂ, ಅದನ್ನು ಮಾರ್ಪಡಿಸುವುದು ಸಾಧ್ಯವೇ ಇಲ್ಲವೆಂದೂ ಈ ಬದಲಾವಣೆ ಬೇಗ ಆಗುವುದೆಂದೂ ಕೇಂದ್ರ ಶಿಕ್ಷಣ ಮಂತ್ರಿ ಡಾ. ತ್ರಿಗುಣಸೇನ್ ಅವರು ಇಂದು ಇಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.