ADVERTISEMENT

ಮಂಗಳವಾರ, 26–3–1968

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2018, 19:30 IST
Last Updated 25 ಮಾರ್ಚ್ 2018, 19:30 IST

ತೌರಿನಿಂದ ಪುಟಾಣಿಗಳ ಪ್ರಯಾಣ (ಪ್ರಜಾವಾಣಿ ಪ್ರತಿನಿಧಿಯಿಂದ)
ಮೈಸೂರು, ಮಾ. 25–
ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಕಳೆದ ಜನವರಿಯಲ್ಲಿ ಹಿಡಿಯಲಾಗಿದ್ದ ಹದಿನೇಳು ಆನೆ ಮರಿಗಳು ತೌರಿನಿಂದ ಪರದೇಶದತ್ತ ಇಂದು ಪ್ರಯಾಣ ಬೆಳೆಸಿದವು.

ಅರಣ್ಯ ಇಲಾಖೆಯಿಂದ ಕೊಂಡು ಕಳೆದ ಎರಡು ತಿಂಗಳ ಕಾಲ ಪೋಷಿಸಿ, ಪಾಲನೆ ಗೈದಿದ್ದ ಮೈಸೂರು ಮೃಗಾಲಯದ ಮೇಲ್ವಿಚಾರಕ ಶ್ರೀ ಕೃಷ್ಣೇಗೌಡರು ಮುದ್ದಿನ ಮರಿಗಳನ್ನು ಬೀಳ್ಕೊಟ್ಟರು.

ಹದಿನಾಲ್ಕು ಹೆಣ್ಣು ಹಾಗೂ ಮೂರು ಗಂಡು ಇವನ್ನೊಳಗೊಂಡ ಈ ಪುಟಾಣಿ ಗಜ ಸಂಸಾರವನ್ನು ಅರಣ್ಯ ಇಲಾಖೆಯಿಂದ ಸುಮಾರು ಒಂದು ಲಕ್ಷ ರೂಪಾಯಿಗಳಿಗೆ ಕೊಂಡಿದ್ದು, ಇದಕ್ಕಿಂತ ಹೆಚ್ಚು ಬೆಲೆ ಬಾಳುವ ಮತ್ತು ಅಪೂರ್ವವಾದ ಒಂದು ಜೊತೆ ಆಪ್ರಿಕಾದ ಬಿಳಿ ಖಡ್ಗಮೃಗ, ಒಂದು ಗಂಡು ನೀರು ಕುದುರೆ, ಒಂದು ಹೆಣ್ಣು ಥಾಮ್ಸನ್ ಗಲೆಟ್ (ಜಿಂಕೆಯಂಥ ಪ್ರಾಣಿ) ಈ ಪುಟಾಣಿಗಳ ವಿನಿಮಯಕ್ಕಾಗಿ ಕೊಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.