ADVERTISEMENT

ಮಂಗಳವಾರ, 3–1–1967

​ಪ್ರಜಾವಾಣಿ ವಾರ್ತೆ
Published 2 ಜನವರಿ 2017, 19:30 IST
Last Updated 2 ಜನವರಿ 2017, 19:30 IST

ಗೋಹತ್ಯೆ ನಿಷೇಧ ಪ್ರಶ್ನೆ ಪರಿಶೀಲನೆಗೆ
ಶೀಘ್ರವೇ ಸಮಿತಿ

ನವದೆಹಲಿ, ಜ. 2–  ಗೋಹತ್ಯೆ ನಿಷೇಧ ಪ್ರಶ್ನೆಯ ನಾನಾ ಮುಖಗಳ ಬಗ್ಗೆ ಪರಿಶೀಲನೆ ನಡೆಸಲು ಶೀಘ್ರವೇ ಸಮಿತಿಯೊಂದನ್ನು ನೇಮಿಸುವ ನಿರೀಕ್ಷೆ ಇದೆ ಎಂದು ಕಾಂಗ್ರೆಸ್‌ ಪಾರ್ಲಿಮೆಂಟರಿ ಪಕ್ಷದ ವಕ್ತಾರರೊಬ್ಬರು ತಿಳಿಸಿದರು.

ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಹಾಗೂ ಸರ್ವದಳೀಯ ಗೋರಕ್ಷ ಮಹಾಭಿಯಾನ ಸಮಿತಿಯ ಪ್ರತಿನಿಧಿಗಳಿಗೂ ಪರಿಣತರಿಗೂ ಅಂತಹ ಸಮಿತಿಯಲ್ಲಿ ಸ್ಥಾನ ದೊರೆಯಲಿದೆ.

ಮಂಗಳೂರು, ಗೋವೆಯಲ್ಲಿ ಸೀಮೆ ಗೊಬ್ಬರ ಕಾರ್ಖಾನೆ ಸ್ಥಾಪನೆಗೆ
ಲೈಸೆನ್ಸ್ ನೀಡಿಕೆ

ನವದೆಹಲಿ, ಜ. 2– ಗೋವಾದಲ್ಲಿ ಖಾಸಗಿ ಕ್ಷೇತ್ರದಲ್ಲಿ ರಾಸಾಯನಿಕ ಗೊಬ್ಬರದ ಕಾರ್ಖಾನೆಯೊಂದನ್ನು ಸ್ಥಾಪಿಸಲು ಭಾರತ ಸರ್ಕಾರವು ಕೈಗಾರಿಕಾ ಲೈಸೆನ್‌್ಸ ಒಂದನ್ನು ಮಂಜೂರು ಮಾಡಿದೆ. ಮಂಗಳೂರಿನಲ್ಲಿ ಒಂದು ಕಾರ್ಖಾನೆಯನ್ನು ಸ್ಥಾಪಿಸಲೂ ಲೈಸೆನ್ಸ್ ನೀಡಲಾಗಿದೆ.

ಭೂಸುಧಾರಣೆ ತಿದ್ದುಪಡಿ
ಮಸೂದೆಗೆ ಒಪ್ಪಿಗೆ

ಬೆಂಗಳೂರು, ಜ. 2– ಮೈಸೂರು ಭೂ ಸುಧಾರಣಾ (ತಿದ್ದುಪಡಿ) ಮಸೂದೆಗೆ ರಾಷ್ಟ್ರಪತಿಯವರು ಡಿಸೆಂಬರ್‌ 26 ರಂದು ಒಪ್ಪಿಗೆ ನೀಡಿದ್ದಾರೆ.
ಡಿಸೆಂಬರ್‌ ತಿಂಗಳಲ್ಲಿ ವಿಧಾನ ಮಂಡಲ ಅಂಗೀಕರಿಸಿದ್ದ ಈ ಮಸೂದೆ ಶಾಸನದ ಮೇರೆಗೆ ಹೊರದೂಡಲ್ಪಟ್ಟಿದ್ದ ಗೇಣಿದಾರ ಸಾಗುವಳಿಗೆ ಜಮೀನು ಮತ್ತೆ ಪಡೆಯಲು ಹಾಗೂ ಭೂಮಾಲಿಕ ಸ್ವಂತ ಸಾಗುವಳಿಗಾಗಿ ಜಮೀನು ವಾಪಸು ಪಡೆಯುವುದರ ಬಗ್ಗೆ ಹೇಳಿಕೆ ಸಲ್ಲಿಸಲು ಮೊದಲು ನೀಡಿದ್ದ ಒಂದು ವರ್ಷ ಅವಧಿಯನ್ನು 15 ತಿಂಗಳಿಗೆ ಹೆಚ್ಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.