ADVERTISEMENT

ಯೋಜನಾ ಮಂಡಳಿ ಪುನರ್ರಚನೆ: ನಿಯಂತ್ರಣಗಳ ಪುನರ್ವಿಮರ್ಶೆ– ರಾಷ್ಟ್ರಪತಿ ಭರವಸೆ

ಭಾನುವಾರ, 19–3–1967

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2017, 19:30 IST
Last Updated 18 ಮಾರ್ಚ್ 2017, 19:30 IST

ನವದೆಹಲಿ, ಮಾ. 18– ಯೋಜನಾ ಆಯೋಗವನ್ನು ಪುನರ್ರಚಿಸಲಾಗುವುದೆಂದು ಇಲ್ಲಿ ಇಂದು ಹೇಳಿದ ರಾಷ್ಟ್ರಪತಿ ಡಾ. ರಾಧಾಕೃಷ್ಣನ್‌ರವರು ನಿಯಂತ್ರಣಗಳ ಜಾರಿ ವಿಚಾರವನ್ನು ಪುನರ್ವಿಮರ್ಶಿಸಲಾಗುವುದೆಂದು ರಾಷ್ಟ್ರಕ್ಕೆ ಭರವಸೆ ನೀಡಿದರು.

ಅನಗತ್ಯವೆಂದು ಕಂಡು ಬಂದ ಹತೋಟಿಗಳನ್ನು ರದ್ದುಗೊಳಿಸಿ ಉಳಿದವುಗಳನ್ನು ಹೆಚ್ಚು ದಕ್ಷತೆಯಿಂದ ಅನ್ವಯಗೊಳಿಸಿ ಜನತೆಗೆ  ಉಪಯುಕ್ತವಾಗುವಂಥ ರೀತಿಯಲ್ಲಿ ಮರು ಹೊಂದಾಣಿಕೆ ಮಾಡಲಾಗುವುದೆಂದರು.

ರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಸಹಕಾರ ಮಾರ್ಗವನ್ನು ಅನುಸರಿಸುವ ವ್ಯವಸ್ಥೆಗಳನ್ನು ಬಲಪಡಿಸಲು ಕೇಂದ್ರ ಸರ್ಕಾರ ಯತ್ನಿಸಲಿದೆ ಎಂದು ಕಾಂಗ್ರೆಸ್ಸೇತರ ರಾಜ್ಯ ಸರ್ಕಾರಗಳಿಗೆ ರಾಷ್ಟ್ರಪತಿ ಭರವಸೆ ನೀಡಿದರು.

ADVERTISEMENT

ಜುಲೈ 1ರಂದು ತುರ್ತು ಪರಿಸ್ಥಿತಿ ಅಂತ್ಯ: ಚವಾಣ್
ನವದೆಹಲಿ, ಮಾ. 18–
ರಾಷ್ಟ್ರದಲ್ಲಿ ಜಾರಿಯಲ್ಲಿರುವ ತುರ್ತು ಪರಿಸ್ಥಿತಿಯನ್ನು ಜುಲೈ 1ರಂದು ಅಂತ್ಯಗೊಳಿಸಲಾಗುವುದೆಂದು ಗೃಹ ಸಚಿವ ಶ್ರೀ ವೈ.ಬಿ. ಚವಾಣ್ ಇಂದು ಲೋಕಸಭೆಗೆ ತಿಳಿಸಿದರು.

ಭೂಸ್ವಾಧೀನ ಶಾಸನ ತಿದ್ದುಪಡಿ ಮಸೂದೆ ಮಂಡನೆ
ನವದೆಹಲಿ, ಮಾ. 18–
ಭೂಸ್ವಾಧೀನ (1894) ಶಾಸನವನ್ನು ತಿದ್ದುಪಡಿ ಮಾಡಲು ಮತ್ತು ಆ ಶಾಸನದ ಪ್ರಕಾರ ಕೆಲವು ಭೂ ಸ್ವಾಧೀನಗಳನ್ನು ಸ್ಥಿರೀಕರಿಸಲು ಅವಕಾಶವಿರುವಂತಹ ಮಸೂದೆಯೊಂದನ್ನು ಇಂದು ಲೋಕಸಭೆಯಲ್ಲಿ ಮಂಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.