ADVERTISEMENT

ಶನಿವಾರ, 15–7–1967

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 19:30 IST
Last Updated 14 ಜುಲೈ 2017, 19:30 IST

ಪಂಜಾಬ್‌ ವಾಯುನೆಲೆಗಳಿಗೆ ಇಂದಿರಾ ಗಾಂಧಿ ಭೇಟಿ
ನವದೆಹಲಿ, ಜುಲೈ 14: ಪ್ರಧಾನಮಂತ್ರಿ  ಶ್ರೀಮತಿ ಇಂದಿರಾ ಗಾಂಧಿ ಅವರು ಪಂಜಾಬ್‌ ರಾಜ್ಯದ ಗಡಿ ಭಾಗದಲ್ಲಿರುವ ವಾಯು ನೆಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪಠಾಣ್‌ಕೋಟ್‌, ಹಲ್ವಾರ ಮತ್ತು  ಅಂಬ್ಲಾ ವಾಯು ನೆಲೆಗಳಿಗೆ  ಭೇಟಿ ಕೊಟ್ಟು ಯುದ್ಧ ವಿಮಾನಗಳನ್ನು ವೀಕ್ಷಣೆ ಮಾಡಿದರು.

 ನಕ್ಸಲರ ವಿರುದ್ಧ ಕಾರ್ಯಾಚರಣೆ: ಒಬ್ಬನ ಹತ್ಯೆ, 284 ಜನರ ಬಂಧನ
ಕಲ್ಕತ್ತಾ, ಜುಲೈ 14: ಪಶ್ಚಿಮ ಬಂಗಾಳದ ಖಾರಿಬಾರಿ ಪ್ರದೇಶದಲ್ಲಿ ನಕ್ಸಲರ ವಿರುದ್ಧ ಪೊಲೀಸರು ನಡೆಸಿದ ಎರಡನೇ ಅತಿ ದೊಡ್ಡ ಕಾರ್ಯಾಚರಣೆಯಲ್ಲಿ ಒಬ್ಬ ನಕ್ಸಲ್‌ವಾದಿಯನ್ನು ಕೊಂದು,  284 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯಲ್ಲಿ 54 ಜನರು ಗಾಯಗೊಂಡಿದ್ದಾರೆ. ಬಂಧಿತರಲ್ಲಿ ಮುಂಚೂಣಿ ನಕ್ಸಲ್‌ ನಾಯಕ ಶಿವಚರಣ್‌ ಪಹಾರಿಯಾ  ಸೇರಿದ್ದಾರೆ.

 ಮದ್ರಾಸ್‌  ಕೊಳೆಗೇರಿಗೆ ಬೆಂಕಿ: ಇಬ್ಬರು ಕಾಂಗ್ರೆಸ್‌ ಕಾರ್ಯಕರ್ತರ ಬಂಧನ
ಮದ್ರಾಸ್‌, ಜುಲೈ 14: ಇಲ್ಲಿನ ಕೊಳೆಗೇರಿಗೆ ಬೆಂಕಿ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ರಾಸ್‌ ನಗರ ಪೊಲೀಸರು ಇಬ್ಬರು ಕಾಂಗ್ರೆಸ್‌ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ವಶಕ್ಕೆ ಪಡೆದಿರುವ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಮಿಳುನಾಡಿನ ಪೊಲೀಸ್‌ ಮಹಾನಿರ್ದೇಶಕರಾದ ಎಫ್‌.ವಿ. ಆರುಳ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.