ADVERTISEMENT

ಶುಕ್ರವಾರ, 21–7–1967

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 19:30 IST
Last Updated 20 ಜುಲೈ 2017, 19:30 IST

ಮಧ್ಯಪ್ರದೇಶ: ಅಧಿವೇಶನ ಹಠಾತ್‌ ಮುಂದೂಡಿಕೆ
ಭೋಪಾಲ್‌, ಜುಲೈ 20–
ಮಧ್ಯಪ್ರದೇಶ ಸರ್ಕಾರ ಗುರುವಾರ ವಿಧಾನಸಭೆಯ ಅಧಿವೇಶನವನ್ನು ಹಠಾತ್ತನೆ ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಈ ನಡುವೆ ಸಂಯುಕ್ತ ವಿರೋಧ ಪಕ್ಷದವರು ಕಾಂಗ್ರೆಸ್‌ ನೇತೃತ್ವದ ಸರ್ಕಾರವನ್ನು ವಜಾಗೊಳಿಸುವಂತೆ ರಾಷ್ಟ್ರಪತಿಯವರ ಮೇಲೆ ಒತ್ತಡ ಹೇರಲು ಸಿದ್ಧತೆ ನಡೆಸಿದ್ದಾರೆ.

ಕಾಂಗ್ರೆಸ್‌ನ 36 ಶಾಸಕರು ನಿನ್ನೆ ವಿರೋಧಪಕ್ಷವನ್ನು ಸೇರಿದ್ದು, ಇದರಿಂದ 296 ಸದಸ್ಯಬಲದ ವಿಧಾನಸಭೆಯಲ್ಲಿ 155 ಸದಸ್ಯರನ್ನು ತಾವು ಹೊಂದಿರುವುದಾಗಿ ಸಂಯುಕ್ತ ವಿರೋಧಪಕ್ಷ ಹೇಳಿದೆ.

ಸಂಯುಕ್ತ ವಿರೋಧಪಕ್ಷವನ್ನು ಸೇರಿರುವ 36 ಕಾಂಗ್ರೆಸ್‌ ಶಾಸಕರೂ ಸೇರಿದಂತೆ ವಿರೋಧ ಪಕ್ಷದ ಎಲ್ಲ ಸದಸ್ಯರು ರಾಷ್ಟ್ರಪತಿಯವರನ್ನು ಭೇಟಿಮಾಡಲು ಇಂದು ದೆಹಲಿಗೆ ತೆರಳಲಿದ್ದಾರೆ ಎಂದೂ ತಿಳಿಸಲಾಗಿದೆ.

ADVERTISEMENT

ಪಶ್ಚಿಮ ಬಂಗಾಳ: ಶಾಸಕರ ಮಾತಿನ ಚಕಮಕಿ
ಕಲ್ಕತ್ತ, ಜುಲೈ 20–
‘ಬಾಂಗ್ಲಾ ಕಾಂಗ್ರೆಸ್‌ನ ಕಾರ್ಯಕರ್ತರೊಬ್ಬರ ಅಪಹರಣದ ಹಿಂದೆ ಕಾಂಗ್ರೆಸ್‌ ಕಾರ್ಯಕರ್ತರ ಕೈವಾಡವಿದೆ’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಶ್ರೀ ಅಜಯ್‌ ಕುಮಾರ್‌ ಮುಖರ್ಜಿ ಅವರು ನೀಡಿದ ಹೇಳಿಕೆ ವಿಧಾನಸಭೆಯಲ್ಲಿ ಇಂದು ಮಾತಿನ ಚಕಮಕಿಗೆ ಕಾರಣವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.