ADVERTISEMENT

ಶುಕ್ರವಾರ, 24–5–1968

​ಪ್ರಜಾವಾಣಿ ವಾರ್ತೆ
Published 23 ಮೇ 2018, 19:30 IST
Last Updated 23 ಮೇ 2018, 19:30 IST

ವೀರೇಂದ್ರ ಪಾಟೀಲ್ ರಾಜ್ಯದ ನೂತನ ಮುಖ್ಯಮಂತ್ರಿ

ಬೆಂಗಳೂರು, ಮೇ 23– ನಲವತ್ತೈದು ವರ್ಷ ವಯಸ್ಸಿನ ಲೋಕೋಪಯೋಗಿ ಸಚಿವ ಶ್ರೀ ವೀರೇಂದ್ರ ಪಾಟೀಲ್ ಅವರು ಮೈಸೂರು ರಾಜ್ಯದ ನೂತನ ಮುಖ್ಯಮಂತ್ರಿ.

ಇಂದು ಬೆಳಿಗ್ಗೆ ಸೇರಿದ್ದ ವಿಧಾನಮಂಡಲದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ನಡೆದ ಸದಸ್ಯರ ಅಭಿಪ್ರಾಯ ಸಂಗ್ರಹದಲ್ಲಿ ‘ಭಾರಿ ಬಹುಮತ’ವನ್ನು ಗಳಿಸಿದ ಶ್ರೀ ಪಾಟೀಲ್ ಅವರನ್ನು ಪಕ್ಷ ಸರ್ವಾನುಮತದಿಂದ ತನ್ನ ನಾಯಕನನ್ನಾಗಿ ಆರಿಸಿತು.

ADVERTISEMENT

ನಾಯಕ ಸ್ಥಾನಕ್ಕೆ ಮತ್ತೊಬ್ಬ ಸ್ಪರ್ಧಿಯಾಗಿದ್ದ ಸಚಿವ ಬಿ.ಡಿ. ಜತ್ತಿ ಅವರು ಶ್ರೀ ವೀರೇಂದ್ರ ಪಾಟೀಲ್ ಅವರ ಹೆಸರನ್ನು ಸೂಚಿಸಿದರು.

**

ವೀರೇಂದ್ರರ ಪರ 133, ಜತ್ತಿ ಅವರಿಗೆ 41 ಮತ

ಬೆಂಗಳೂರು, ಮೇ 23– ಇಂದು ವಿಧಾನ ಮಂಡಲದ ಕಾಂಗ್ರೆಸ್ ಪಕ್ಷದಲ್ಲಿ ಅನೌಪಚಾರಿಕವಾಗಿ ನಡೆದ ಸದಸ್ಯರ ಅಭಿಪ್ರಾಯ ಸಂಗ್ರಹಣೆಯಲ್ಲಿ 133 ಮಂದಿ ಸದಸ್ಯರು ಸಚಿವ ಶ್ರೀ ವೀರೇಂದ್ರ ಪಾಟೀಲ್ ಅವರಿಗೂ 41 ಮಂದಿ ಸಚಿವ ಶ್ರೀ ಜತ್ತಿ ಅವರಿಗೂ ಬೆಂಬಲ ನೀಡಿದರೆಂದು ತಿಳಿದುಬಂದಿದೆ.

**

ಇಳಿದ ಭಾರ

ಬೆಂಗಳೂರು, ಮೇ 23– ಪರೀಕ್ಷೆ ಮುಗಿದ ದಿನ ವಿದ್ಯಾರ್ಥಿಯ ಮನಸ್ಸು ಎಷ್ಟು ಹಗುರ.

ಇಂದು ಕಾಂಗ್ರೆಸ್ ಪಕ್ಷದ ನಾಯಕತ್ವದ ಹೊಣೆಯಿಂದ ದೂರವಾದ ಶ್ರೀ ನಿಜಲಿಂಗಪ್ಪ ಅವರ ಮನಸ್ಸು ಹಗುರವಾಗಿತ್ತು. ‘ಒಂದು ಭಾರ ಕಳೆಯಿತು’ ಎಂದರು.

ಸಂಜೆ ನಗರದ ಪತ್ರಿಕಾ ವರದಿಗಾರರು ಏರ್ಪಡಿಸಿದ್ದ ಸತ್ಕಾರ ಕೂಟದಲ್ಲಿ ಮುಖ್ಯಮಂತ್ರಿಗಳು ಪರೀಕ್ಷೆಯ ಕಡೆಯ ದಿನದ ಆನಂದವನ್ನು ನೆನೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.