ADVERTISEMENT

ಅಗತ್ಯವಾಗಿದ್ದ ಕ್ರಮ

​ಪ್ರಜಾವಾಣಿ ವಾರ್ತೆ
Published 15 ಜನವರಿ 2017, 19:30 IST
Last Updated 15 ಜನವರಿ 2017, 19:30 IST

ರಾಜ್ಯದ ಗ್ರಾಮಾಂತರ ಪ್ರದೇಶಗಳ ಜನರ ಅಗತ್ಯವನ್ನು ರಾಜ್ಯ ಸರ್ಕಾರ ಸರಿಯಾಗಿ ಗುರುತಿಸಿದೆ. ಹಾಗಾಗಿ  ಆಯುಷ್ ವೈದ್ಯರಿಗೂ  ಅಲೋಪಥಿ ಔಷಧಗಳನ್ನು ಉಪಯೋಗಿಸಲು ಅನುಮತಿ ನೀಡುವುದರ ಮೂಲಕ ಗ್ರಾಮೀಣ ಭಾಗದ ರೋಗಿಗಳಿಗೆ ಅವಶ್ಯಕ ಆರೋಗ್ಯ ಸೇವೆ ಒದಗಿಸಲು ಅಣಿಯಾಗಿದೆ.

ಇದು ಗ್ರಾಮೀಣ ನಿವಾಸಿಗಳಿಗೆ ಹಾಗೂ ಅಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಮಹದುಪಕಾರದಂತೆ ಇದೆ. ನಗರವಾಸಿಗಳಿಗೆ ಮಾತ್ರ ಸಿಗುತ್ತಿದ್ದ ಸೌಲಭ್ಯಗಳು ಕುಗ್ರಾಮದವರಿಗೂ ಸಿಗುವಂತಾಗಲಿದೆ.  ಆಯುಷ್ ವೈದ್ಯಾಧಿಕಾರಿಯಾಗಿ ನನ್ನ ಸೇವಾ ಅವಧಿಯ ಬಹುದೊಡ್ಡ ಭಾಗವನ್ನು ಗ್ರಾಮೀಣ ಪ್ರದೇಶಗಳಲ್ಲಿ ಪೂರೈಸಿದ ನನಗೆ ಸರ್ಕಾರದ ಈ ಕ್ರಮ ಸಮಾಧಾನ, ಸಂತೋಷ ಕೊಟ್ಟಿದೆ.

ಅಲೋಪಥಿ ವೈದ್ಯಪದ್ಧತಿಯನ್ನು ಉಪಯೋಗಿಸಲು  ಅನುಮತಿ ಪಡೆಯುವ ಆಯುಷ್ ವೈದ್ಯರ ಜವಾಬ್ದಾರಿ ಹೆಚ್ಚಲಿದೆ ಎಂಬುದನ್ನು ವೈದ್ಯರೂ ಅರಿಯಬೇಕು. ಅಲೋಪಥಿ ಔಷಧಗಳನ್ನು ಎಗ್ಗಿಲ್ಲದೆ ಉಪಯೋಗಿಸಿ, ತಾವು ಕಲಿತ ಮೂಲ ವೈದ್ಯಶಾಸ್ತ್ರಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಹೊಸ ವ್ಯವಸ್ಥೆ ವಿರೋಧಿಸುವವರ ಎದುರು ನಗೆಪಾಟಲಿಗೆ ಈಡಾಗಬಾರದು.
-ಡಾ. ಈಶ್ವರ ಶಾಸ್ತ್ರಿ ಮೋಟಿನಸರ, ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.