ADVERTISEMENT

ಅಡ್ಡಪಲ್ಲಕ್ಕಿ ಉತ್ಸವ ವಿವಾದದ ಸುತ್ತ...

ಡಾ.ಎಸ್‌.ವಿದ್ಯಾಶಂಕರ, ಬೆಂಗಳೂರು
Published 14 ಅಕ್ಟೋಬರ್ 2013, 19:30 IST
Last Updated 14 ಅಕ್ಟೋಬರ್ 2013, 19:30 IST

ಅಡ್ಡಪಲ್ಲಕ್ಕಿ ಉತ್ಸವಕ್ಕೆ ಪ್ರಾಚೀನ ಪರಂಪರೆ ಯೊಂದಿದೆ ಎಂಬುದನ್ನು ಮುಂದಿಟ್ಟುಕೊಂಡು ವಾದಿಸುವ ಒಂದು ವರ್ಗ ಹಾಗೂ ಅದು ಅಮಾನವೀಯ, ಮಾನವಹಕ್ಕಿಗೆ ವಿರುದ್ಧವಾ ದುದು ಎಂದು ವಾದಿಸುವ ಪ್ರಗತಿಪರ ಮನೋ ಭಾವದ ಒಂದು ವರ್ಗ ಇದನ್ನು ಒಂದು  ಪ್ರತಿ ಷ್ಠೆಯ ಮನೋಭಾವವಾಗಿ ಸ್ವೀಕರಿಸಿದಂತಿದೆ.

ನಾನು ಆಚಾರ್ಯ ವರ್ಗ ಹಾಗೂ ವಿರಕ್ತ ವರ್ಗಗಳಲ್ಲಿ ಸಾಮರಸ್ಯ ಬಯಸಿ ಪ್ರಯತ್ನ  ನಡೆಸಿರುವವನು. ನನಗೆ ಇಬ್ಬರೂ ಸಮಾನರು. ವೀರಶೈವವು ಪ್ರಗತಿಪರ ಧರ್ಮ. ‘ಮಾನವ ಧರ್ಮಕ್ಕೆ ಜಯವಾಗಲಿ’ ಎಂದು ಘೋಷಿಸುವ ಆಚಾರ್ಯರು, ಮನುಷ್ಯಕುಲದ ಸಮಾನತೆ,  ಸರ್ವಾಂಗೀಣ ವಿಕಸನಕ್ಕಾಗಿ ಹೊರಾಡಿದ ಶಿವ ಶರಣರು ಸಣ್ಣ ಕಾರಣಕ್ಕಾಗಿ, ಸಾಮಾಜಿಕ ಶಾಂತಿ ಕಲಕುವುದು, ಆಡಳಿತವನ್ನು ಇಕ್ಕಟ್ಟಿಗೆ ಸಿಕ್ಕಿಸುವುದು ವಿಪರ್ಯಾಸ.

ನಾವು ಪ್ರಗತಿಪರ ಧರ್ಮಕ್ಕೆ ಸೇರಿದವರೆಂದು ಅಭಿಮಾನದಿಂದ ಹೇಳುವ ಗುರು – ವಿರಕ್ತ ಪರಂಪರೆಯವರು ಅದನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸಬೇಕು.

ಅಡ್ಡಪಲ್ಲಕ್ಕಿ ಉತ್ಸವಕ್ಕೆ ಪರಂಪರೆಯಿದೆ ಎಂದು ಹೇಳುವವರು ಅದು ಮಾನವ ನಿರ್ಮಿತ ಎಂಬುದನ್ನು ಮರೆಯಬಾ ರದು. ಹಳೆಯದರಲ್ಲಿ ವಿಶ್ವಾಸ – ಭಕ್ತಿ – ಶ್ರದ್ಧೆ ಇಟ್ಟಿರುವವರು 21ನೆಯ ಶತಮಾನದಲ್ಲಿ ಪರಿವರ್ತನೆಯ ಹೊಸಗಾಳಿ ಬೀಸುತ್ತಿರುವಾಗ ಅದನ್ನು ಸ್ವಲ್ಪ ಬದಿಗಿಟ್ಟು ಮಾನವೀಯವಾಗಿ ಈ ಸಮಸ್ಯೆ ಪರಿಹಾರಗಾಣಿಸಬೇಕು.

ಹಳೆಯದು ಹಳೆಯದು, ನಾವು ಉಸಿರಾಡುತ್ತಿರುವುದು ಆಧುನಿಕ ಸ್ಥಿತ್ಯಂತರದ ವೇಗಯುಗ ಬದುಕಿನ ನಡುವೆ. ಹೀಗಾಗಿ, ಮಾನಸಿಕ ಪರಿವರ್ತನೆ ಸಮಾಜದ ಹಿತ ಹಾಗೂ ನೈತಿಕತೆ ಈ ದೃಷ್ಟಿಯಿಂದ ಇಂದಿನ ಅಗತ್ಯಗಳಲ್ಲಿ ಪ್ರಮುಖವಾದುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.