ADVERTISEMENT

ಅಮಾನವೀಯ ಪರೀಕ್ಷೆ

ವಿಜಯ್ ಹೆಮ್ಮಿಗೆ
Published 27 ಜುಲೈ 2015, 19:30 IST
Last Updated 27 ಜುಲೈ 2015, 19:30 IST

ಅಖಿಲ ಭಾರತ ವೈದ್ಯಕೀಯ ಪೂರ್ವ ಪ್ರವೇಶ ಪರೀಕ್ಷೆಯನ್ನು ಸಿಬಿಎಸ್‌ಇ ಇತ್ತೀಚೆಗೆ ದೇಶದ ವಿವಿಧ ಕೇಂದ್ರಗಳಲ್ಲಿ ನಡೆಸಿತು. ಆದರೆ ಪರೀಕ್ಷೆ ಬರೆದ ಕೆಲವು ಅಭ್ಯರ್ಥಿಗಳ ಪಾಡು ಹೇಳತೀರದಾಗಿತ್ತು.

ತುಂಬು ತೋಳಿನ ಅಂಗಿಯನ್ನು ಬಿಚ್ಚಿಸಲಾಯಿತು. ಶೂಗಳನ್ನು ತೆಗೆಸಲಾಯಿತು, ಕತ್ತಿನ ದಾರ, ಸರ, ಕೈಯಲ್ಲಿನ ಕಾಶಿ ದಾರ, ಇವೆಲ್ಲಾ ಹೋಗಲಿ, ಕಿವಿಯೋಲೆ, ಮೂಗುಬೊಟ್ಟು, ಹೇರ್‌ಬ್ಯಾಂಡ್‌, ಕನ್ನಡಕ... ಹೀಗೆ ಎಲ್ಲವನ್ನೂ ಪರೀಕ್ಷಿಸಿ ವಿಡಿಯೊ ಚಿತ್ರೀಕರಣ ಮಾಡಲಾಯಿತು.

ಒಬ್ಬ ಮಹಿಳಾ ಅಭ್ಯರ್ಥಿಗೆ ಮೂಗುಬೊಟ್ಟು ತೆಗೆಯಲು ಸಾಧ್ಯವಾಗದೆ ಕೊನೆಗೆ ಪರೀಕ್ಷೆಯೇ ಬೇಡವೆನ್ನುವ ಹೊತ್ತಿಗೆ, ಅಲ್ಲಿದ್ದವರೊಬ್ಬರು ಕಷ್ಟಪಟ್ಟು ಅದನ್ನು ತೆಗೆದರು. ಆಗ ಆಕೆಯ ಮೂಗಿನಲ್ಲಿ ರಕ್ತ ಬರತೊಡಗಿತು. ಮತ್ತೊಬ್ಬ ಅಭ್ಯರ್ಥಿ ಕಾಲಿನ ಗಾಯಕ್ಕೆ ಹಾಕಿಸಿಕೊಂಡು ಬಂದಿದ್ದ ಬ್ಯಾಂಡೇಜನ್ನೂ ಬಿಚ್ಚಿಸಿದಾಗ ರಕ್ತ ಒಸರತೊಡಗಿತು.

ಇವೆಲ್ಲವೂ ಬೇಕಿತ್ತೆ? ಎಲ್ಲ ಕೋಣೆಗಳಲ್ಲಿಯೂ ವಿಡಿಯೊ ಚಿತ್ರೀಕರಣ ಮಾಡುವಾಗ, ಬ್ಲೂಟೂತ್ ಅಥವಾ ಇತರ ಯಾವುದೇ ಬಗೆಯಲ್ಲಿ ನಕಲು ಮಾಡುವ ಪ್ರಯತ್ನಗಳ ಬಗ್ಗೆ ನಿಗಾ ವಹಿಸಬಹುದಲ್ಲವೇ? ಅದು ಬಿಟ್ಟು ಅಭ್ಯರ್ಥಿಗಳ ಮನಸ್ಸಿನಲ್ಲಿ ಭಯ ಉಂಟು ಮಾಡುವ ಇಂತಹ ಅಮಾನವೀಯ ಪರೀಕ್ಷೆಗಳು ಬೇಕೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.