ADVERTISEMENT

ಆಟಂಬಾಂಬ್‌ ಪಟಾಕಿಗಳನ್ನು ನಿಷೇಧಿಸಿ

ಎಲ್‌.ನಾರಾಯಣ ರೆಡ್ಡಿ
Published 13 ಅಕ್ಟೋಬರ್ 2014, 19:30 IST
Last Updated 13 ಅಕ್ಟೋಬರ್ 2014, 19:30 IST

ದೀಪಾವಳಿ ಹಬ್ಬಕ್ಕೆ ಮುಂಚಿತವಾಗಿಯೇ ಅಲ್ಲಲ್ಲಿ ಷೆಡ್‌ಗಳನ್ನು ಹಾಕಿಕೊಂಡು ಪಟಾಕಿಗಳನ್ನು ಮಾರುತ್ತಾರೆ. ಶಬ್ದ ಹೊಮ್ಮಿಸುವ ಆಟಂಬಾಂಬ್‌ ಪಟಾಕಿಗಳನ್ನು ಮನೆಗಳ ಮುಂದೆ ಹಚ್ಚುವುದರಿಂದ ದಾರಿಯಲ್ಲಿ ಓಡಾಡುವ ಪಾದಚಾರಿಗಳಿಗೆ, ಅದರಲ್ಲೂ ಅನಾರೋಗ್ಯದಿಂದ ಬಳಲುವವರು, ವೃದ್ಧರು, ಎಳೆಮಕ್ಕಳು, ಹೆಂಗಸರಿಗೆ ಶಬ್ದ ಮತ್ತು ಹೊಗೆಯಿಂದ ಆಸ್ತಮಾ, ಕೆಮ್ಮು, ಉಸಿರಾಟಕ್ಕೆ ಬಹಳ ತೊಂದರೆಯಾಗುತ್ತಿದೆ.

ಕಣ್ಣು ಕಳೆದುಕೊಂಡು, ಕೈಕಾಲುಗಳು ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ನರಳುವವರ ದೃಶ್ಯಗಳನ್ನು ಪತ್ರಿಕೆಗಳಲ್ಲಿ ನೋಡುತ್ತಿರುತ್ತೇವೆ. ಅದೂ ಅಲ್ಲದೆ ಹಳೆಯದಾದ ಕಟ್ಟಡಗಳು ಕುಸಿಯುವ ಮತ್ತು ಕಟ್ಟಡಗಳು ಬಿರುಕು ಬಿಡುವ ಸಂಭವ ಇರುತ್ತದೆ. ರಸ್ತೆಗಳಲೆಲ್ಲಾ ಪಟಾಕಿ ಸುಟ್ಟ ಪೇಪರ್‌ ತ್ಯಾಜ್ಯವು ರಾಶಿ ರಾಶಿಯಾಗಿ ಬಿದ್ದು ಪರಿಸರವನ್ನು ಹಾಳು ಮಾಡುತ್ತದೆ. ಆದ್ದರಿಂದ ಅತಿ ಶಬ್ದ ಬರುವ ಆಟಂಬಾಂಬ್‌ ಪಟಾಕಿಗಳನ್ನು ಮಾರಲು ನಿಷೇಧಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.