ADVERTISEMENT

ಆಶಯದ ಅಜ್ಞಾತವಾಸ

ರೇವಣ್ಣ ಎಂ.ಜಿ.
Published 30 ಡಿಸೆಂಬರ್ 2015, 19:30 IST
Last Updated 30 ಡಿಸೆಂಬರ್ 2015, 19:30 IST

ಕುವೆಂಪು ಜಯಂತಿಯನ್ನು (ಡಿ. 29) ವಿಶ್ವ ಮಾನವ ದಿನವನ್ನಾಗಿ ಆಚರಿಸಲು ಸರ್ಕಾರ ಆದೇಶಿಸಿರುವುದು ಸ್ವಾಗತಾರ್ಹ. ಆದರೆ ಕುವೆಂಪು ಸಾರಿದ ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿಗಳೆಂಬ ಪಂಚಾಕ್ಷರಿ ಮಂತ್ರಗಳಿಗೆ ಇಂದು ಅನುಕ್ರಮವಾಗಿ ಧರ್ಮರಾಯ, ಬಲಭೀಮ, ಅರ್ಜುನ, ನಕುಲ, ದಿವ್ಯಜ್ಞಾನಿ ಸಹದೇವರೆಂಬ ಪಂಚ ಪಾಂಡವರ ಸ್ಥಿತಿ ಬಂದೊದಗಿದೆ.

ಈ ಮಹಾಪುರುಷರ ಕಾಲದಿಂದಲೂ ವಿಶ್ವಮಾನವ ತತ್ವಗಳಿಗೆ ಒಂದಿಲ್ಲೊಂದು ರೀತಿಯ ವನವಾಸವೇ. ಪ್ರಸ್ತುತ ಆಧುನಿಕ ಯುಗದಲ್ಲಂತೂ ಅಜ್ಞಾತವಾಸ! ಪಾಂಡವರು ಅಜ್ಞಾತವಾಸ ಮುಗಿಸಿ ಮರಳಿದರು. ಈ ತತ್ವಗಳು ಅಜ್ಞಾತವಾಸ ಮುಗಿಸುವುದೆಂದೋ?

ಎಲ್ಲ ದಿನಾಚರಣೆಗಳು ಕೇವಲ ಆಚರಣೆಗೆ ಸೀಮಿತವಾಗದೆ ಅನುಷ್ಠಾನಗೊಂಡಾಗ ಮಾತ್ರ ಅಜ್ಞಾತವಾಸದಿಂದ ಬಿಡುಗಡೆ. ಆ ಸುದಿನ ಬರಬೇಕಾದರೆ ಮನುಜರು ಪ್ರೀತಿ, ಕರುಣೆ, ಅನುಕಂಪ, ಶಾಂತಿ, ಸಹಬಾಳ್ವೆಯನ್ನು ರೂಢಿಸಿಕೊಳ್ಳಲೇಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.