ADVERTISEMENT

ಗಟಾರ–ಪ್ರಚಾರ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2017, 19:30 IST
Last Updated 21 ನವೆಂಬರ್ 2017, 19:30 IST

‘ಆರಂಭದಲ್ಲೇ ಗಟಾರಕ್ಕಿಳಿದ ಪ್ರಚಾರ’ ಎಂಬ ಲೇಖನಕ್ಕೆ (ನಾರಾಯಣ ಎ., ಪ್ರ.ವಾ., ನ. 21) ಪ್ರತಿಕ್ರಿಯೆ. ನಿಜವಾದ ನಾಯಕರ ಬಾಯಲ್ಲಿ ಈ ಮಟ್ಟದ ಭಾಷೆ ಹುಟ್ಟುವುದಿಲ್ಲ; ವೈಯುಕ್ತಿಕ ನಿಂದನೆಗೆ ಅವರು ಇಳಿಯುವುದಿಲ್ಲ. ‘ನಾಯಕತ್ವದ ಗುಣ ಲವಲೇಶವೂ ಇಲ್ಲದೆ ಏನೇನನ್ನೋ ನೆಚ್ಚಿಕೊಂಡು ನಾಯಕರಾಗಹೊರಟವರು ಕೆಳಮಟ್ಟದ ಮಾತುಗಳನ್ನಾಡಿಯೇ ಮೇಲೆ ಮೇಲೆ ಏರಲು ಬಯಸುತ್ತಾರೆ’ ಎಂದು ಅವರು ಹೇಳಿರುವ ಮಾತುಗಳನ್ನು ನಾನು ಎರಡೂ ದಶಕಗಳಿಂದಲೂ ಎಲ್ಲಾ ಪಕ್ಷಗಳ ನಾಯಕರ ಕೀಳು ಅಭಿರುಚಿಯ ಹೇಳಿಕೆಗಳನ್ನು ಉಲ್ಲೇಖಿಸಿ ಟೀಕೆ ಮಾಡುತ್ತಲೇ ಬಂದಿದ್ದೇನೆ.

ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಟಿಪ್ಪು ಸುಲ್ತಾನರನ್ನು ಹಂಗಿಸುವ ಭರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತು ಆಡಿದ ಮಾತುಗಳು ಗಟಾರಕ್ಕಿಂತ ಕೆಳಮಟ್ಟದಲ್ಲಿವೆ. ಈ ಹೇಳಿಕೆ ಬಗ್ಗೆ ಅವಹೇಳನಕಾರಿ ಭಾಷೆ ಬಳಸದೆಯೇ ಮೈಸೂರಿನಲ್ಲಿ ನಾನು ಟೀಕಿಸಿದ್ದೆ. ಸೈದ್ಧಾಂತಿಕ ನೆಲೆಯ ವಿಶ್ಲೇಷಣೆ
ಯನ್ನೂ ಸಹಿಸದವರಿಂದ ಬೆದರಿಕೆ ಕರೆಗಳು ಬರುತ್ತಿವೆ.

ಗೌರಿ ಲಂಕೇಶ್‌ ಹತ್ಯೆ, ದೀಪಿಕಾ ಪಡುಕೋಣೆ ಅವರಿಗೆ ಒಡ್ಡಿರುವ ಬೆದರಿಕೆ ಇವೆಲ್ಲಕ್ಕೂ ಪೂರಕ ಹಿನ್ನೆಲೆ ಸೃಷ್ಟಿಸಿರುವುದು ಕೆಲವು ರಾಜಕೀಯ ನಾಯಕರು ಹಾಗೂ ಸಂಸ್ಕೃತಿ ರಕ್ಷಣೆಗೆ ನಿಂತಿರುವ ನೈತಿಕ ಯೋಧರು ತಾನೇ?

ADVERTISEMENT

–ಪ್ರೊ.ಬಿ.ಕೆ.ಚಂದ್ರಶೇಖರ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.