ADVERTISEMENT

ದಾರಿ ತಪ್ಪದಿರಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 12 ಫೆಬ್ರುವರಿ 2016, 19:30 IST
Last Updated 12 ಫೆಬ್ರುವರಿ 2016, 19:30 IST

ಹೊಸ ವರ್ಷಾಚರಣೆಯಂದು ಹೊಸ ಕುಡುಕರು ಹುಟ್ಟಿಕೊಳ್ಳುತ್ತಿದ್ದಾರೆ ಎಂದು ಅಧ್ಯಯನ ಸಮೀಕ್ಷೆಯೊಂದು ಈಚೆಗೆ ವರದಿ ನೀಡಿತ್ತು. ಇದೀಗ ಚುನಾವಣಾ ಪ್ರಕ್ರಿಯೆಯಲ್ಲೂ ಅಂಥದೇ ದೃಶ್ಯ ಕಣ್ಣಿಗೆ ಬೀಳುತ್ತಿದೆ. ಅದರಲ್ಲಿ  ಯುವಕರೇ ಮುಂಚೂಣಿಯಲ್ಲಿರುವುದು ನಿಜಕ್ಕೂ ದುರಂತದ ಸಂಗತಿ.

ರಾಜಕಾರಣಿಗಳೇ ಅಂಥ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿರುವುದು ಆತಂಕದ ಸಂಗತಿ. ಈ ಸಂಗತಿಯನ್ನು ನಮ್ಮ ಸಮಾಜ ತುಂಬ ಗಂಭೀರವಾಗಿ ಪರಿಗಣಿಸಬೇಕಿದೆ.

ಏಕೆಂದರೆ ಮೊದಲೇ ನಿರುದ್ಯೋಗದ ಸಮಸ್ಯೆ ನಮ್ಮ ಯುವಜನರನ್ನು ಕಾಡುತ್ತಿದೆ. ಅಂಥ ಯುವ ಜನರು ಈ ಚುನಾವಣೆಯ ಸಂದರ್ಭದಲ್ಲಿ ರಾಜಕಾರಣಿಗಳು ನೀಡುವ ಮದ್ಯದ ಅಮಲಿಗೆ ಮನಸೋತು ನಂತರ ಶಾಶ್ವತವಾಗಿ ಅಂಥ ದುಶ್ಚಟಗಳಿಗೆ  ಬಲಿಯಾಗುವಂತಾಗುತ್ತದೆ.

ಈ ದುರಂತ  ತಪ್ಪಿಸಲು ಪಾಲಕರು ಜಾಗರೂಕರಾಗಿರಬೇಕು; ಪ್ರಜಾಪ್ರಭುತ್ವ ನೀಡುವ ಅವಕಾಶಗಳು ಹೀಗೆ ದಾರಿ ತಪ್ಪಿ ಹೋಗದಂತೆ ಕಾಪಾಡಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.