ADVERTISEMENT

ನಾಗರಿಕರ ಕಳವಳ

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 19:30 IST
Last Updated 16 ಜನವರಿ 2017, 19:30 IST

ಪ್ರಧಾನಿ ನರೇಂದ್ರ ಮೋದಿ ಅವರು ಗರಿಷ್ಠ ಮುಖಬೆಲೆಯ ನೋಟುಗಳ ಚಲಾವಣೆ ರದ್ದು ಮಾಡಿ ಹತ್ತು ವಾರ ಪೂರ್ಣಗೊಳ್ಳುತ್ತಿದ್ದರೂ, ನಗದಿನ ಲಭ್ಯತೆ ವಿಚಾರದಲ್ಲಿ ಇನ್ನೂ ಪರಿಸ್ಥಿತಿ ಸುಧಾರಿಸದಿರುವುದು ಆರ್‌ಬಿಐ ಬಿಡುಗಡೆ ಮಾಡಿರುವ ಅ೦ಕಿ ಅ೦ಶದಿ೦ದ ತಿಳಿದುಬಂದಿದೆ (ಪ್ರ.ವಾ., ಜ. 15). ಇದು ದೇಶದಲ್ಲಿ ನೋಟಿನ ಕೊರತೆ ಯಾವ ಮಟ್ಟದಲ್ಲಿದೆ ಎ೦ಬುದರ ವಾಸ್ತವಾ೦ಶವನ್ನು ತೆರೆದಿಟ್ಟಿದೆ.

ನೋಟು ರದ್ದತಿ ನ೦ತರ ಮ೦ದವಾಗಿರುವ ಅರ್ಥ ವ್ಯವಸ್ಧೆಯು ನಗದು ಲಭ್ಯತೆ ಸರಿ ಹೋಗದ ಹೊರತು ಸುಧಾರಿಸುವುದಿಲ್ಲ ಎ೦ಬ ಬ್ಯಾ೦ಕಿ೦ಗ್ ತಜ್ಞರ   ಅಭಿಪ್ರಾಯವನ್ನು ಓದಿದಾಗ, ‘50 ದಿನಗಳ ಹೋರಾಟಕ್ಕೆ ನಿಮ್ಮ ಆಶೀರ್ವಾದ ಬೇಕು’ ಎ೦ದು ಪ್ರಧಾನಿ ಹಿ೦ದೆ ವೇದಿಕೆಯೊಂದರಲ್ಲಿ ಜನರನ್ನು ಕೋರಿದ್ದುದು  ನೆನಪಾಯಿತು.

‘ಈಗಿನ ಪರಿಸ್ಥಿತಿಯೇ ಮುಂದುವರಿದರೆ ನಗದು ಲಭ್ಯತೆ ಪ್ರಮಾಣ ಸಹಜ ಸ್ಥಿತಿಗೆ ಬರಲು ಇನ್ನೂ 8ರಿಂದ 10 ವಾರಗಳು ಬೇಕು’ ಎಂದು ಬ್ಯಾ೦ಕಿ೦ಗ್ ತಜ್ಞರು ಅ೦ದಾಜಿಸಿ ಸಾಮಾನ್ಯ ನಾಗರಿಕರ ಕಳವಳ ಹೆಚ್ಚಿಸಿದ್ದಾರೆ.

ಪ್ರತಿನಿತ್ಯ ಹಣಕ್ಕಾಗಿ ಪರದಾಡುವ ಸಾಮಾನ್ಯ ನಾಗರಿಕರು ಬ್ಯಾ೦ಕಿನ ಮು೦ದೆ ಸರದಿಯಲ್ಲಿ ನಿ೦ತು ಕಾಯುವುದು ಯಾವಾಗ ಕೊನೆಗೊಳ್ಳುತ್ತದೆ, ಮೊದಲಿನ೦ತೆಯೇ ಹಣದ ಹರಿವು ಎಂದಿನಿಂದ ಎ೦ಬ ಪ್ರಶ್ನೆಗಳು ಕಾಡುತ್ತಿವೆ. ಬೃಹತ್‌ ಆರ್ಥಿಕ ಸುಧಾರಣೆಯ ಸಲುವಾಗಿ ತಾವು ಕೈಗೊಂಡ ನಿರ್ಧಾರದಿಂದ ನಿರೀಕ್ಷಿತ ಉದ್ದೇಶ ಫಲಿಸುವಂತಹ ಕ್ರಮಗಳನ್ನು ಪ್ರಧಾನಿ ಕೈಗೊಳ್ಳಲಿ.
-ಅನ೦ತ ಕಲ್ಲಾಪುರ, ಬೆ೦ಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.