ADVERTISEMENT

ನಿವೃತ್ತ ನೌಕರರಿಗೂ ದೊರಕಲಿ

ಹಿಂದುಪುರ ವೀರಭದ್ರಪ್ಪ, ಬಳ್ಳಾರಿ
Published 1 ಫೆಬ್ರುವರಿ 2015, 19:30 IST
Last Updated 1 ಫೆಬ್ರುವರಿ 2015, 19:30 IST

ರಾಜ್ಯ ಸರ್ಕಾರಿ ನೌಕರರಿಗೆ ಆರೋಗ್ಯ ಭದ್ರತೆ ಒದಗಿಸಲು ‘ಜ್ಯೋತಿ ಸಂಜೀವಿನಿ’ ಯೋಜನೆ ರೂಪಿಸಿರುವುದು ಒಳ್ಳೆಯದು. ಸರ್ಕಾರಿ ನೌಕರರು ಹಾಗೂ ಅವರ ಕುಟುಂಬ ವರ್ಗದವರಿಗೆ ಉಚಿತವಾಗಿ ಆರೋಗ್ಯ ಸೇವೆ  ಪಡೆಯಲು ಈ ಮೂಲಕ ಅವಕಾಶ  ನೀಡಿರುವುದು ಸಂತಸದ ಸಂಗತಿ. ಆದರೆ, ಸಾಮಾನ್ಯವಾಗಿ ವ್ಯಕ್ತಿ 60–70ರ ನಡುವಣ ವಯಸ್ಸಿನಲ್ಲಿ  ನಾನಾ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚು.

ಕಾಯಿಲೆಗಳು ಮುತ್ತಿಕೊಳ್ಳುವ ಹೊತ್ತಿಗೆ ನೌಕರರು ಸೇವೆಯಿಂದ ನಿವೃತ್ತರಾಗಿರುತ್ತಾರೆ. ನಿವೃತ್ತರು ಈ ಸೌಕರ್ಯದಿಂದ ವಂಚಿತರಾಗಿರುವುದು ವಿಷಾದನೀಯ.

ಮುಖ್ಯಮಂತ್ರಿಯವರು ನಿವೃತ್ತ  ನೌಕರರ ಆರೋಗ್ಯದ ಬಗ್ಗೆಯೂ ಕಳಕಳಿ ತೋರಿಸಬೇಕು.  ಮಕ್ಕಳಿಗೆ ಇಲ್ಲದಿದ್ದರೂ ಕೊನೇಪಕ್ಷ ಗಂಡ ಹೆಂಡತಿಗೆ ಅನ್ವಯವಾಗುವಂತೆ ‘ಜ್ಯೋತಿ ಸಂಜೀವಿನಿ’ ಯೋಜನೆಯನ್ನು ವಿಸ್ತರಿಸಿದರೆ ಹೆಚ್ಚಿನ ಜನರಿಗೆ ಅನುಕೂಲವಾಗುತ್ತದೆ.
ನಿವೃತ್ತಿ ಹೊಂದಿ, ಇಳಿ ವಯಸ್ಸಿನಲ್ಲಿ ತಮ್ಮ ಮಕ್ಕಳ ಮೇಲೆ ಅವಲಂಬನೆ ಆಗದೆ ಸರ್ಕಾರದ ಯೋಜನೆಯಿಂದ ಮುಪ್ಪಿನಲ್ಲೂ ನೆಮ್ಮದಿಯ ನಿಟ್ಟುಸಿರು ಬಿಡಬಹುದಲ್ಲವೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.