‘10ರಲ್ಲಿ 6 ಭಾರತೀಯರು ಪತ್ನೀ ಪೀಡಕರು’ (ಪ್ರ.ವಾ., ನ.11). ಪತ್ನಿಯರು ಪತಿಗಳನ್ನು ಪೀಡಿಸುತ್ತಾರೊ ಪತಿಗಳು ಪತ್ನಿಯರನ್ನು ಪೀಡಿಸುತ್ತಾರೊ ಎಂಬುದು ಅಪ್ರಕೃತ; ‘ಇದಮಿತ್ಥಂ’ ಎಂಬ ನಿರ್ಣಯ ಅಶಕ್ಯವೂ ಹೌದು!
ಆದರೆ ಇದೊಂದು ಪುಟಾಣಿ ಕತೆ: ಒಬ್ಬ ರಾಜನನ್ನು ಪುರೋಹಿತ ‘ತ್ರಿಪೀಡಾಸ್ತು’ (ನಿನಗೆ ಮೂರು ಪೀಡೆಗಳಾಗಲಿ) ಎಂದು ಹರಸಿದನಂತೆ. ಸಹಜವಾಗಿಯೆ ರಾಜನಿಗೆ ಕೋಪ ಬಂತು. ಆದರೆ ಮುಂದಿನ ವಿವರಣೆಯನ್ನು ಕೇಳಿದ ಮೇಲೆ ಅವನು ಪ್ರಸನ್ನನಾಗಿ ಪುರೋಹಿತನಿಗೆ ಮೆಚ್ಚುಗಾಣಿಕೆ ಕೊಟ್ಟನಂತೆ: ‘ಒಂದು ಕಡೆ (ಹಾಸಿಗೆಯಲ್ಲಿ) ನಿನ್ನ ಪತ್ನಿ (ಯರು) ನಿನ್ನನ್ನು ಪೀಡಿಸಲಿ; ಇನ್ನೊಂದು ಕಡೆ ಮಕ್ಕಳು ಪೀಡಿಸಲಿ; ಮತ್ತೊಂದು ಕಡೆ ಯಾಚಕರು ಪೀಡಿಸಲಿ!’
ಒಂದಿಲ್ಲೊಂದು ಬಗೆಯ ‘ಪೀಡೆ’ಯಿಲ್ಲದೆ ಬದುಕಿಲ್ಲ ಎನ್ನಬಹುದೆ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.