ADVERTISEMENT

ಪುಸ್ತಕ ಸಂಸ್ಕೃತಿ

ಶಿ.ಗು.ಕುಸುಗಲ್ಲ, ಬೆಳಗಾವಿ
Published 26 ಏಪ್ರಿಲ್ 2015, 19:30 IST
Last Updated 26 ಏಪ್ರಿಲ್ 2015, 19:30 IST

ವಿವೇಕವನ್ನು ಹೆಚ್ಚಿಸುವಲ್ಲಿ, ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವಲ್ಲಿ ಪುಸ್ತಕಗಳ ಪಾತ್ರ ಹಿರಿದು. ಓದುವ ಅಭಿರುಚಿ ಹೆಚ್ಚಿಸುವ ಕಾರಣದಿಂದಲೇ  ಸಾರ್ವಜನಿಕ ಗ್ರಂಥಾಲಯಗಳನ್ನು ತೆರೆಯಲಾಗಿದೆ. ಗ್ರಂಥಗಳ ಸಂಗ್ರಹ ಮತ್ತು ಪತ್ರಿಕೆಗಳ  ಪೂರೈಕೆಗಾಗಿ ಸ್ಥಳೀಯ ಸಂಸ್ಥೆಗಳು ಗ್ರಂಥಾಲಯ ಕರ ಸಂಗ್ರಹಿಸುತ್ತಿವೆ.    

ಈ ಮೂಲಕ ಸಂಗ್ರಹಗೊಂಡ ಕೋಟಿಗಟ್ಟಲೆ ಹಣವನ್ನು ಗ್ರಂಥಾಲಯ ಇಲಾಖೆಗೆ ಪಾವತಿಸದಿರುವದು ವಿಷಾದನೀಯ. ಆರ್ಥಿಕ ಮುಗ್ಗಟ್ಟಿನಿಂದ ವಾಚನಾಲಯಗಳು ಸೊರಗುತ್ತಿವೆ. ಗ್ರಂಥ ಖರೀದಿಯೂ ಸ್ಥಗಿತಗೊಂಡಿದೆ. ಇದು  ಕಳವಳಕಾರಿ.  ಪುಸ್ತಕ ಪ್ರಕಾಶನಕ್ಕೂ ಇದರ ಬಿಸಿ ತಟ್ಟದೇ ಇರದು.

ದೃಶ್ಯ ಮಾಧ್ಯಮದ ಸೆಳೆತ, ಓದುವ ಪ್ರವೃತ್ತಿಯನ್ನು ಈಗಾಗಲೆ ಕುಂಠಿತಗೊಳಿಸಿದೆ. ಅದು ಇನ್ನಷ್ಟು ಕ್ಷೀಣಿಸುವುದು ಬೇಡ. ಪುಸ್ತಕ ಸಂಸ್ಕೃತಿ ಪೋಷಣೆ  ಸರ್ಕಾರದ ಕರ್ತವ್ಯ. ಅದನ್ನು ಮರೆಯುವುದು ಸರಿಯಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT