ADVERTISEMENT

ಬಡವರ ಕಷ್ಟ ಅರಿಯಲಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2017, 19:30 IST
Last Updated 20 ಸೆಪ್ಟೆಂಬರ್ 2017, 19:30 IST

ಕೇಂದ್ರ ಸಚಿವ ಅಲ್ಫೋನ್ಸ್ ಕಣ್ಣಂತಾನಂ ಅವರು ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಮಾತನಾಡುತ್ತಾ, ‘ಪೆಟ್ರೋಲ್ ಖರೀದಿಸುವವರು ಯಾರೂ ಉಪವಾಸ ಇರುವುದಿಲ್ಲ’ ಎಂದು ಹೇಳಿರುವುದು ವರದಿಯಾಗಿದೆ. ನಾನೇ ಹಲವಾರು ಬಂಕ್‍ಗಳಲ್ಲಿ ನೋಡಿರುವಂತೆ, ಬಹಳಷ್ಟು ಬೈಕ್ ಸವಾರರು ದಿನಂಪ್ರತಿ ₹30- ₹40ರ ಪೆಟ್ರೋಲ್ ಹಾಕಿಸಿ ಕೆಲಸಕ್ಕೆ ಹೋಗುತ್ತಾರೆ.

ಅವರು ದುಡಿಯುವ ದಿನಗೂಲಿಯಲ್ಲಿ ಮನೆ, ಮಕ್ಕಳು, ಶಿಕ್ಷಣ ಎಲ್ಲವನ್ನೂ ಸರಿದೂಗಿಸಬೇಕು. ಐಷಾರಾಮಿ ಕಾರು ಮಾಲೀಕರು ಮಾತ್ರ ಪೆಟ್ರೋಲ್ ಬಳಸುತ್ತಾರೆ ಎನ್ನುವ ಕಲ್ಪನೆಯಲ್ಲಿ ಕೇಂದ್ರ ಸಚಿವರು ಹಾಗೆ ಹೇಳಿರಬಹುದು.

ಬೈಕ್ ಸವಾರರಲ್ಲಿ ಬಹಳಷ್ಟು ಜನರು ಅಂದಂದಿನ ದುಡಿಮೆಯಿಂದಲೇ ಬದುಕು ನಡೆಸುತ್ತಿದ್ದಾರೆ ಎಂಬ ತಿಳಿವಳಿಕೆ ಅವರಿಗೆ ಇದ್ದಂತಿಲ್ಲ. ಜನಸಾಮಾನ್ಯರ ಸಂಕಷ್ಟಗಳು ಆಕಾಶದಲ್ಲಿ ಹಾರಾಡುವವರಿಗೆ ಹೇಗೆ ಅರ್ಥವಾಗಬೇಕು?
–ಡಾ. ಚನ್ನು ಅ. ಹಿರೇಮಠ, ರಾಣೆಬೆನ್ನೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.