ADVERTISEMENT

ಬದುಕುವ ಹಕ್ಕು

ಡಿ.ಶಾರದಮ್ಮ ಕಂಪಾಲಿದಾವಣಗೆರೆ
Published 1 ಮೇ 2016, 19:44 IST
Last Updated 1 ಮೇ 2016, 19:44 IST

ಬಾಪು ಹೆದ್ದೂರಶೆಟ್ಟಿಯವರ  ‘ಭಿಕ್ಷುಕರ ಗೋಳು ಕೇಳುವವರು ಯಾರು?’ ಲೇಖನ (ಸಂಗತ, ಏ. 27)  ಅರ್ಥಪೂರ್ಣವಾಗಿದೆ. ಭಿಕ್ಷಾಟನೆಯನ್ನು ಅಪರಾಧವೆಂದು ಪರಿಗಣಿಸಿ, ಭಿಕ್ಷುಕರನ್ನು ಶಿಕ್ಷೆಗೆ ಒಳಪಡಿಸುವ ಕಾನೂನು ಅಮಾನವೀಯವಾದುದು. ಸಮಾಜದಲ್ಲಿ ಬದುಕುವ ಹಕ್ಕು ಎಲ್ಲರಿಗೂ ಇದೆ.

ಮನೆ ಇದ್ದೂ ಬೀದಿಗೆ ಬಂದು ಬದುಕುವುದು ಯಾರಿಗೆ ತಾನೆ ಇಷ್ಟ...? ಬಡವ ಬಡವನಾಗಿಯೇ ಸಾಯುತ್ತಾನೆ. ಹಣವಂತರು ಎಕರೆಗಟ್ಟಲೆ ಜಾಗದಲ್ಲಿ ಮನೆ ಕಟ್ಟಿಕೊಂಡು ಐಷಾರಾಮಿ ಬದುಕು ಸಾಗಿಸುತ್ತಾರೆ. ದೇಶದಲ್ಲಿ ಭಿಕ್ಷುಕರೇ ಇಲ್ಲದಂತೆ ಮಾಡಲು ಸಾಧ್ಯ. ದೇವರ ಹೆಸರಲ್ಲಿ  ಸಂಗ್ರಹವಾಗುವ ಅಪಾರ ಹಣದಲ್ಲಿ ಭಿಕ್ಷುಕರಿಗೆ ಬದುಕು ಕೊಡಲು ಸಾಧ್ಯ.

ಪ್ರತಿವರ್ಷ ಇಷ್ಟಿಷ್ಟು ಅಂತ ಭಿಕ್ಷುಕರನ್ನು ಗುರುತಿಸಿ ಅವರ ಬದುಕನ್ನು ಸರಿದಾರಿಗೆ ತರಬಹುದು. ಸರ್ಕಾರ, ಮಠಗಳಿಗೆ ಕೊಡುವ ಹಣ ಭಿಕ್ಷುಕರ ಬದುಕು ಹಸನಾಗಿಸಲು  ವಿನಿಯೋಗಿಸಬಹುದು. ಅದಕ್ಕಿಂತ  ಅರ್ಥಪೂರ್ಣ ಕೆಲಸ ಇದೆಯೇ? ಡಾ.ಅಂಬೇಡ್ಕರ್‌ರವರು ಅದನ್ನೇ ತಾನೆ ಹೇಳಿರುವುದು?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.